ಕರಾವಳಿಕೃಷಿ ಸಂಪತ್ತುಸುಳ್ಯ

ಸುಳ್ಯ: ಗಗನಕ್ಕೇರಿದ ತರಕಾರಿ ಬೆಲೆ, ನೂರರ ಗಡಿ ದಾಟುತ್ತಿದೆ ಟೊಮೇಟೊ! ಗ್ರಾಹಕರ ಜೇಬಿಗೆ ಕತ್ತರಿ

272

ನ್ಯೂಸ್‌ ನಾಟೌಟ್‌: ಮುಂಗಾರು ಕೈ ಕೊಟ್ಟ ಕಾರಣ ಕೃಷಿ ವಲಯದ ಮೇಲೆ ಭಾರಿ ಪರಿಣಾಮ ಬೀರಿದೆ. ಇದರಿಂದಾಗಿ ತರಕಾರಿ ಉತ್ಪಾದನೆ ಕುಂಠಿತವಾಗಿದ್ದು, ತರಕಾರಿ ಬೆಲೆ ದಿಢೀರ್ ಹೆಚ್ಚಳವಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಬೆಲೆ ಏರಿಕೆಯಿಂದ ತರಕಾರಿ ಅಂಗಡಿಯಲ್ಲಿ ವ್ಯಾಪಾರವಿಲ್ಲದೆ ಅಂಗಡಿ ಮಾಲೀಕರಿಗೂ ತೊಂದರೆಯಾಗಿದೆ. ಇರುವ ಅಲ್ಪಸ್ವಲ್ಪ ತರಕಾರಿಗೆ ಭಾರಿ ಡಿಮೆಂಡ್‌ ಬಂದಿದೆ. ಇದರಿಂದಾಗಿ ತರಕಾರಿ ಪ್ರಿಯರು, ಹೋಟೆಲ್‌ ಮಾಲೀಕರು ಹಾಗೂ ಗ್ರಾಹಕರಿಗೆ ಬೆಲೆ ಬಿಸಿ ತಟ್ಟಿದ್ದು, ಜೇಬಿಗೆ ಕತ್ತರಿ ಬೀಳ್ತಿದೆ.

ತರಕಾರಿಗಳ ಬೆಲೆ ಹೆಚ್ಚಳಗೊಂಡಿದ್ದು, ಸುಳ್ಯದಲ್ಲಿ ಒಂದು ಕೆ.ಜಿ. ಟೊಮೇಟೊಗೆ ಕಳೆದ ಎರಡು ದಿನಗಳಲ್ಲಿ ರೂ.80 ಇದ್ದ ಬೆಲೆ ಇಂದು 100 ರೂ. ಆಗಿದ್ದು, ನಾಳೆ ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತರಕಾರಿ ಪೂರೈಕೆದಾರರು ನ್ಯೂಸ್‌ ನಾಟೌಟ್‌ಗೆ ತಿಳಿಸಿದ್ದಾರೆ. ನುಗ್ಗೆಕಾಯಿ ದರ ರೂ.100 (ನಿನ್ನೆ 80) ಕ್ಯಾಪ್ಸಿಕಂ- 80 (70), ಬೆಂಡೆಕಾಯಿ 50 ರೂ. (40), ಈರುಳ್ಳಿ 24ರೂ. (20) ಕ್ಯಾಬೇಜ್ 30 (20) ಆಲೂಗೆಡ್ಡೆ 30 (25) ಹೆಚ್ಚಳವಾಗಿದೆ. ಒಂದೆಡೆ ತರಕಾರಿ ಬೆಲೆ ಪದೇ ಪದೆ ಹೆಚ್ಚಳವಾಗುತ್ತಿದೆ. ಮತ್ತೊಂದೆಡೆ ಇದೀಗ ಅಂಗಡಿಗೆ ಬರುವ ತರಕಾರಿಗಳೂ ಬಹುಬೇಗ ಕೊಳೆತು ಹೋಗುವ ಕಾರಣ ವ್ಯಾಪಾರದ ಮೇಲೆ ಹೊಡೆತ ಬೀಳುತ್ತಿದೆ ಎಂದು ತರಕಾರಿ ವ್ಯಾಪಾರಸ್ಥರು ತಿಳಿಸಿದ್ದಾರೆ.

ದ.ಕ. ಜಿಲ್ಲೆಗೆ ಹಾಸನ, ಚಿಕ್ಕಮಗಳೂರು, ಕೋಲಾರ ಮೊದಲಾದೆಡೆಗಳಿಂದ ತರಕಾರಿ ಪೂರೈಕೆಯಾಗುತ್ತಿದೆ. ಆದರೆ ಇತ್ತೀಚೆಗೆ ಹವಾಮಾನ ವೈಪರಿತ್ಯದಿಂದ ರೈತರು ಹಾಕಿರುವ ತರಕಾರಿ ಬೆಳೆಗಳು ಕೈಗೆ ಸಿಗದೆ ತೋಟಗಳಲ್ಲೆ ಹಾಳಾಗುತ್ತಿದ್ದು, ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ನಿರೀಕ್ಷೆಯಂತೆ ತರಕಾರಿ ಬರದಿರುವುದರಿಂದ ದಲ್ಲಾಳಿಗಳು, ವ್ಯಾಪಾರಸ್ಥರು ಪಕ್ಕದ ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಆಮದು ಮಾಡಿಕೊಂಡು ಮಾರಾಟ  ಮಾಡುವ ಅನಿವಾರ್ಯತೆ ಹೆಚ್ಚಾಗಿದ್ದು, ತರಕಾರಿ ಬೆಲೆ ಗಗನಕ್ಕೆ ಏರಿಕೆ ಆಗಿದೆ.

See also  ಬ್ರಹ್ಮಾಂಡ ಗುರೂಜಿಯ ಸ್ಪೋಟಕ ಭವಿಷ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್-ಏನದು ಭವಿಷ್ಯ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget