ಕ್ರೀಡೆ/ಸಿನಿಮಾಕ್ರೈಂ

“ಆ ನಿರ್ದೇಶಕ ನನ್ನನ್ನು ಹೊಟೇಲ್‌ ರೂಮ್‌ ಗೆ ಕರೆದಿದ್ದ..!” ಸಿನಿ ಜರ್ನಿಯ ಕರಾಳ ನೆನಪೊಂದನ್ನು ಬಿಚ್ಚಿಟ್ಟ ‌ʼಡರ್ಟಿ ಪಿಕ್ಚರ್‌ʼ ನಟಿ !

ನ್ಯೂಸ್ ನಾಟೌಟ್:  ಬಾಲಿವುಡ್‌ ಫೋಟೋಗ್ರಾಫರ್‌ ಒಬ್ಬರು ಸೆರೆ ಹಿಡಿದ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಸಂದರ್ಶನವೊಂದರಲ್ಲಿ ವಿದ್ಯಾ ಬಾಲನ್‌ ಕಾಸ್ಟಿಂಗ್‌ ಕೌಚ್‌ ಅನುಭವದ ಬಗ್ಗೆ ಮಾತನಾಡಿದ್ದಾರೆ.

‌ʼಡರ್ಟಿ ಪಿಕ್ಚರ್‌ʼ ನಟಿ ತಮ್ಮ ಜೀವನದಲ್ಲಿ ಒಮ್ಮೆ ನಡೆದ ಆ ಘಟನೆಯನ್ನು ನೆನಪಿಸಿಕೊಂಡು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ನನ್ನನು ನಾನು ಯಾವಾಗಲೂ ಅದೃಷ್ಟವಂತೆ ಎಂದು ಭಾವಿಸುತ್ತೇನೆ. ಎಂದಿಗೂ ಕಾಸ್ಟಿಂಗ್‌ ಕೌಚ್‌ ನಂತಹ ಬಲೆಗೆ ಬೀಳಲಿಲ್ಲ. ಆದರೆ ಅದೊಂದು ದಿನ ಒಬ್ಬ ನಿರ್ದೇಶರು ತನ್ನೊಂದಿಗೆ ನಡೆದುಕೊಂಡ ವರ್ತನೆ ಬಗ್ಗೆ ಹೇಳುತ್ತೇನೆ.  ಸಿನಿಮಾವೊಂದರ ಬಗ್ಗೆ ಮಾತನಾಡುವ ನಿಟ್ಟಿನಲ್ಲಿ ನಿರ್ದೇಶಕರೊಬ್ಬರು ನನ್ನನು ಅವರ ಹೊಟೇಲ್‌ ರೂಮ್‌ ಗೆ ಕರೆದಿದ್ದರು. ನಾನು ಅವರಿಗೆ ಕಾಫಿ ಶಾಪ್‌ ನಲ್ಲಿ ಭೇಟಿಯಾಗುವ ಹೇಳಿದೆ.

ಆದರೆ ಅವರು ಹೊಟೇಲ್‌ ರೂಮ್‌ ನಲ್ಲಿ ಭೇಟಿಯಾಗಲು ಹೇಳಿದರು. ಆ ನಿರ್ದೇಶಕರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ನಾನು ಅರ್ಥೈಸಿಕೊಂಡು ಆಯಿತೆಂದು ಹೇಳಿ ಹೊಟೇಲ್‌ ರೂಮ್‌ ಗೆ ಹೋದೆ. ಆದರೆ ಹೊಟೇಲ್‌ ಕೋಣೆಯ ಅರ್ಧ ಬಾಗಿಲನ್ನು ಹಾಗೆಯೇ ಓಪನ್‌ ಮಾಡಿಟ್ಟು ಮಾತನಾಡಲು ಆರಂಭಿಸಿದೆ. ಬಳಿಕ ಆ ನಿರ್ದೇಶಕ ಐದೇ ನಿಮಿಷದಲ್ಲಿ ಹೊಟೇಲ್‌ ಕೋಣೆಯಿಂದ ಹೊರ ಹೋದರು ಎಂದು  ಹಳೆಯ ಘಟನೆಯ ಬಗ್ಗೆ ವಿದ್ಯಾ ಬಾಲನ್‌ ಮಾತನಾಡಿದ್ದಾರೆ.

ಇತ್ತೀಚೆಗೆ ವಿದ್ಯಾ ಬಾಲನ್‌ ʼಜಲ್ಸಾʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಮುಂದೆ ʼನೀಯತ್ & ಲವರ್ಸ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Related posts

ದೊಡ್ಡಡ್ಕ: ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು, ಫಲಿಸದ ಚಿಕಿತ್ಸೆ

ಸೋಣಂಗೇರಿ: ಟಿಪ್ಪರ್-ಬೈಕ್ ಡಿಕ್ಕಿ, ಸವಾರನಿಗೆ ಗಂಭೀರ ಗಾಯ

ಕಾಂತಾರ ಸಿನಿಮಾದಲ್ಲಿ ನೀವೂ ನಟಿಸ್ತೀರಾ..? ಇಲ್ಲಿದೆ ಭರ್ಜರಿ ಅವಕಾಶ..! ‘ಹೊಂಬಾಳೆ ಫಿಲ್ಮ್’ ಹಂಚಿಕೊಂಡ ಪೋಸ್ಟರ್ ನಲ್ಲೇನಿದೆ?