Latestಕ್ರೈಂವಿಡಿಯೋವೈರಲ್ ನ್ಯೂಸ್

ಕಬ್ಬಿನ ಜ್ಯೂಸ್‌ ಮೆಷಿನ್ ನಲ್ಲಿ ಸಿಲುಕಿದ ಮಹಿಳೆಯ ಜಡೆ..! ವಿಡಿಯೋ ವೈರಲ್..!

650
Spread the love

ನ್ಯೂಸ್ ನಾಟೌಟ್ : ಕೆಲವೊಂದು ಬಾರಿ ಈ ಯಂತ್ರಗಳಿಗೆ ಆಕಸ್ಮಿಕವಾಗಿ ಕೈ, ಕಾಲು ಸಿಲುಕಿ ಅವಘಡಗಳು ಸಂಭವಿಸುತ್ತದೆ. ಇಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆ ನಡೆದಿದ್ದು, ಕಬ್ಬಿನ ಹಾಲು ತಯಾರಿಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರ ಜಡೆ ಕಬ್ಬಿನ ಜ್ಯೂಸ್ ಮೆಷಿನ್ ಗೆ ಸಿಕ್ಕಿ ಹಾಕಿಕೊಂಡಿದೆ.

ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಮಹಿಳೆ ಪಾರಾಗಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಈ ಆಘಾತಕಾರಿ ಘಟನೆ ತೆಲಂಗಾಣದ ಮಹಬೂಬಾಬಾದ್‌ ಜಿಲ್ಲೆಯ ಡೋರ್ನಕಲ್‌ ಪಟ್ಟಣದಲ್ಲಿ ನಡೆದಿದ್ದು, ಇಲ್ಲಿನ ಅಂಚೆ ಕಚೇರಿಯ ಬಳಿ ಕಬ್ಬಿನ ಜ್ಯೂಸ್‌ ಮಾರಿ ಜೀವನ ಸಾಗಿಸುತ್ತಿದ್ದ ಮಹಿಳೆಯೊಬ್ಬರ ಕೂದಲು ಕಬ್ಬಿನ ಜ್ಯೂಸ್‌ ಮೆಷಿನ್‌ ಗೆ ಸಿಲುಕಿದಂತಹ ಘಟನೆ ನಡೆದಿದೆ.

ಕಬ್ಬಿನ ಹಾಲು ತಯಾರಿಸುತ್ತಿದ್ದ ವೇಳೆ ಯಂತ್ರದ ಚಕ್ರಕ್ಕೆ ಮಹಿಳೆಯ ಜಡೆ ಸಿಕ್ಕಿ ಹಾಕಿಕೊಂಡಿದ್ದು, ತಕ್ಷಣ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಅಲ್ಲಿದ್ದವರು ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಮಾರ್ಚ್‌ 25 ರಂದು ವಿಡಿಯೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿಪಾಕ್ ಜೈಲಿನಲ್ಲಿ ಭಾರತೀಯ ಮೀನುಗಾರ ಆತ್ಮಹತ್ಯೆ..! ಜೈಲಿನ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!

See also  ಉಳ್ಳಾಲ: ಊಟ ಮಾಡಿ ಮಲಗಿದ್ದ ವಿವಾಹಿತ ಯುವಕ ಮತ್ತೆ ಏಳಲೇ ಇಲ್ಲ..! ಹೃದಯಾಘಾತದಿಂದ ಸಾವು ಸಂಭವಿಸಿರುವ ಶಂಕೆ
  Ad Widget   Ad Widget   Ad Widget   Ad Widget   Ad Widget   Ad Widget