ಕರಾವಳಿಕ್ರೈಂವೈರಲ್ ನ್ಯೂಸ್

ಮಂಗಳೂರು: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ ವಿಡಿಯೋ ವೈರಲ್! ಮುಸ್ಲಿಂ ಯುವಕರಿಗೆ ನೋಟಿಸ್!

205

ನ್ಯೂಸ್ ನಾಟೌಟ್ : ಮಂಗಳೂರಿನ ಉಳ್ಳಾಲದಲ್ಲಿಯೂ ಈದ್ ಮಿಲಾದ್ ಮೆರವಣಿಗೆಯ (Eid Milad Procession) ನೆಪದಲ್ಲಿ ಯುವಕರು ಪುಂಡಾಟ ಮೆರೆದಿದ್ದು, ಇದೀಗ ಯುವಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.ಉಳ್ಳಾಲ ಪೊಲೀಸರು (Ullala Police Staion) ವೀಡಿಯೋ ಆಧರಿಸಿ ಯುವಕರ ಪತ್ತೆ ಮಾಡಿದ್ದಾರೆ.

ಉಳ್ಳಾಲ, ಮಂಜನಾಡಿ, ಮದಕ, ಕೋಣಾಜೆ, ದೇರಳಕಟ್ಟೆ, ಬಂಟ್ವಾಳ ಹಾಗೂ ಬೆಳ್ತಂಗಡಿ ಭಾಗದ ಯುವಕರು ಎಂದು ತಿಳಿದು ಬಂದಿದೆ. ಈ ಎಲ್ಲಾ ಯುವಕರಿಗೆಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

ಈದ್ ಮಿಲಾದ್ ಮೆರವಣಿಗೆ ನಡೆಸಿದ ನೂರಾರು ಯುವಕರ ತಂಡ ಉಳ್ಳಾಲದ ಅಬ್ಬಕ್ಕ ಸರ್ಕಲ್ ಬಳಿ ರಸ್ತೆ ಬಂದ್ ಮಾಡಿ ಅಬ್ಬಕ್ಕ ವೃತ್ತವನ್ನೇರಿ ಹಸಿರು ಬಾವುಟ ಪ್ರದರ್ಶಿಸಿ ಚೀರಾಡುತ್ತಾ, ಸೈಲೆನ್ಸರ್ ಶಬ್ಧ ಮಾಡಿ, ಬೈಕ್ ಹಾರ್ನ್ ಹಾಕಿಕೊಂಡು ಪುಂಡಾಟ ಮೆರೆದಿದ್ದರು.

ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿವಮೊಗ್ಗ (Shivamogga) ಘಟನೆಯ ಬೆನ್ನಲ್ಲೇ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಪುಂಡಾಟ ಮೆರೆದ ಯುವಕರಿಗೆ ನೋಟಿಸ್ ನೀಡಿದ್ದಾರೆ.

See also  ಈ ಖ್ಯಾತ ನಟಿಯ ಹೋಟೆಲ್‌ ರೂಮ್‌ನಲ್ಲಿ ಸೀಕ್ರೇಟ್‌ ಕ್ಯಾಮೆರಾ! ಕನ್ನಡ ಸಿನಿಮಾರಂಗದಲ್ಲಿನ ಘಟನೆಯ ಬಗ್ಗೆ ನಟಿಯ ಸ್ಪೋಟಕ ಹೇಳಿಕೆ! ಏನಿದು ಘಟನೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget