ನ್ಯೂಸ್ ನಾಟೌಟ್ : ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭ ಮೇಳ ಬುಧವಾರ ಸಂಪನ್ನಗೊಂಡಿದ್ದು ಕೋಟ್ಯಾಂತರ ಮಂದಿ ಇಲ್ಲಿನ ಸಂಗಮದಲ್ಲಿ ಪವಿತ್ರ ಸ್ನಾನಗೈದಿದ್ದಾರೆ. ಇನ್ನೂ ಕೆಲವರಿಗೆ ಕಾರಣಾಂತರಗಳಿಂದ ಬರಲಾಗದೇ ಇದ್ದವರಿಗೆ ಅವರ ಕಡೆಯವರು ವಿಡಿಯೋ ಕರೆ ಮೂಲಕ ಅಲ್ಲಿನ ಸಂಗಮವನ್ನು ಕಣ್ತುಂಬಿಕೊಳ್ಳುವಂತೆ ಮಾಡಿದ್ದಾರೆ, ಹಲವರು ತೀರ್ಥವನ್ನೂ ಕೊಂಡೊಯ್ದಿದ್ದಾರೆ. ಆದರೆ ಇಲ್ಲೊಬ್ಬರು ಮಹಿಳೆ ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಜೊತೆ ಕುಂಭಮೇಳಕ್ಕೆ ಬರಲಾಗದ ಪತಿಗೆ ವಿಡಿಯೋ ಕರೆ ಮಾಡಿ ಮೊಬೈಲನ್ನೇ ಗಂಗಾ ನದಿಯಲ್ಲಿ ಆರು ಬಾರಿ ಮುಳುಗಿಸಿ ತೆಗೆದಿದ್ದಾಳೆ.
View this post on Instagram
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇತ್ತೀಚೆಗೆ ಕುಂಭಮೇಳಕ್ಕೆ ಬರಲಾಗದವರಿಗೆ ಡಿಜಿಟಲ್ ಸ್ನಾನದ ವ್ಯವಸ್ಥೆ ಮಾಡಲಾಗುವುದು. ನಿಮ್ಮ ಫೋಟೋ ಕಳುಹಿಸಿ 500 ರೂ. ಪಾವತಿಸಿ ಎಂದು ಜಾಹಿರಾತೋಂದು ವೈರಲ್ ಆಗಿತ್ತು. ಈಗ ಈಕೆಯ ಈ ವಿಚಿತ್ರ ಭಕ್ತಿ ವೈರಲ್ ಆಗುತ್ತಿದೆ.