Latestದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಬಿಸಿಲ ಶಾಖದಿಂದ ಪಾರಾಗಲು ಐಷಾರಾಮಿ ಕಾರಿಗೆ ಸಗಣಿ ಲೇಪಿಸಿದ ವೈದ್ಯ..! ವಿಡಿಯೋ ವೈರಲ್

307
Spread the love

ನ್ಯೂಸ್‌ ನಾಟೌಟ್: ಬೇಸಿಗೆ ಕಾಲದ ಆರಂಭದಲ್ಲಿಯೇ ಸೂರ್ಯನ ಶಾಖ ಹೆಚ್ಚಾಗಿದ್ದು, ಸೆಖೆ ತಾಳಲಾದರೆ ಜನ ಪರದಾಡುತ್ತಿದ್ದಾರೆ. ಆಯುರ್ವೇದಿಕ್‌ ವೈದ್ಯರೊಬ್ಬರು ಬಿಸಿಲ ಶಾಖದಿಂದ ಪಾರಾಗಲು ವಿನೂತನ ಉಪಾಯವನ್ನು ಕಂಡುಕೊಂಡಿದ್ದಾರೆ. ವಾಹನದಲ್ಲಿ ಓಡಾಡುವಾಗ ಎಸಿ ಇದ್ರೂ ಕೂಡಾ ಸೆಖೆ ಮಾತ್ರ ಕಮ್ಮಿಯಾಗಲ್ಲ ಎಂದು ತಮ್ಮ ಕಾರಿಗೆ ಹಸುವಿನ ಸಗಣಿ ಲೇಪಿಸಿದ್ದಾರೆ.

ಇದು ಕಾರನ್ನು ಸ್ವಾಭಾವಿಕವಾಗಿ ಕೂಲಾಗಿರಿಸುವುದು ಮಾತ್ರವಲ್ಲದೆ, ಇದರಿಂದ ವಾಹನಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮಹಾರಾಷ್ಟ್ರದ ಪಂಢಪುರದ ಆಯುರ್ವೇದಿಕ್‌ ವೈದ್ಯ ಡಾ. ರಾಮ್‌ ಹರಿ ಕದಮ್‌ ಎಂಬವರು ಈ ಸುಡು ಬೇಸಿಗೆಯಲ್ಲಿ ಕಾರನ್ನು ಕೂಲಾಗಿಡಲು ತಮ್ಮ ಐಷಾರಾಮಿ ಮಹೀಂದ್ರಾ XUV 300 ಕಾರಿಗೆ ಸಗಣಿ ಲೇಪಿಸಿದ್ದಾರೆ.

ಸಗಣಿಗೆ ಗೋಮೂತ್ರವನ್ನು ಮಿಶ್ರಣ ಮಾಡಿ ಪೇಸ್ಟ್‌ ತಯಾರಿಸಿ ಅದನ್ನು ಕಾರಿಗೆ ಹಚ್ಚಿದ್ದಾರೆ. ಇದರಿಂದ ಅರ್ಧದಷ್ಟು ತಾಪಮಾನ ಕಡಿಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಹಸುವಿನ ಸಗಣಿ ವಿಕಿರಣವನ್ನು ವಿರೋಧಿ ಗುಣವನ್ನು ಹೊಂದಿದೆ, ಇದರಿಂದಾಗಿ ಕಾರಿನ ಬಣ್ಣ ಕೂಡಾ ಮಸುಕಾಗುವುದಿಲ್ಲ ಹಾಗೆಯೇ ಶಾಖ-ಸಂಬಂಧಿತ ಸಮಸ್ಯೆಗಳಿಂದ ವಾಹನವನ್ನು ರಕ್ಷಿಸುತ್ತದೆ. ಮತ್ತು ಇತರ ವಾಹನಗಳಿಗೆ ಹೋಲಿಸಿದರೆ ಸಗಣಿ ಬಳಿದ ಕಾರಿನ ಒಳಗಿನ ತಾಪಮಾನವು 50% ನಷ್ಟು ತಂಪಾಗಿರುತ್ತದೆ ಎಂದಿದ್ದಾರೆ.

 

View this post on Instagram

 

A post shared by News not out (@newsnotout)

ಇದನ್ನೂ ಓದಿಇಂದು(ಮಾ.29) ಈ ವರ್ಷದ ಮೊದಲ ಸೂರ್ಯ ಗ್ರಹಣ, ಯುಗಾದಿಗೂ ಮೊದಲು ಬಂದ ಸೂರ್ಯ ಗ್ರಹಣದಿಂದ ಧಾರ್ಮಿಕ ಮಹತ್ವ..!

ಮಯನ್ಮಾರ್‌ ಭೂಕಂಪದಲ್ಲಿ ಸಾವಿನ ಸಂಖ್ಯೆ 694ಕ್ಕೆ ಏರಿಕೆ..! 15 ಟನ್‌ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ ಭಾರತ

See also  ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ಕಾರ್ಯಾಚರಣೆ, ಇಲ್ಲಿವೆ ಸಮುದ್ರದಲ್ಲಿ ನಡೆದ ಸಾಹಸಗಳ ಪೋಟೊಗಳು
  Ad Widget   Ad Widget   Ad Widget   Ad Widget   Ad Widget   Ad Widget