ನ್ಯೂಸ್ ನಾಟೌಟ್ : ಹಣ ಕೊಡಲು ನಿರಾಕರಿಸಿದನೆಂದು ಮಂಗಳಮುಖಿಯರ ತಂಡವೊಂದು ಯುವಕನ ಮೇಲೆ ದರ್ಪ ತೋರಿಸಿ ಆತನಿಗೆ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಂಗಳಮುಖಿಯರ ಈ ವರ್ತನೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಹಣಕೊಡಲು ನಿರಾಕರಿಸಿದನೆಂದು ಮೂರು ನಾಲ್ಕು ಜನ ಮಂಗಳಮುಖಿಯರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಬರೇಲಿ ಪೊಲೀಸ್ ಈ ಬಗ್ಗೆ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.