ಕ್ರೈಂಬೆಂಗಳೂರುವಿಡಿಯೋವೈರಲ್ ನ್ಯೂಸ್

ಭೀಕರ ಸರಣಿ ಅಪಘಾತ..! ಜನನಿಬಿಡ ರಸ್ತೆಯಲ್ಲಿ ನಡೆಯಿತು ಅನಾಹುತ! ಇಲ್ಲಿದೆ ಭಯಾನಕ ವಿಡಿಯೋ

177

ನ್ಯೂಸ್‌ ನಾಟೌಟ್‌: ಕಾರೊಂದು ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದು ನಾಲ್ವರು ಗಾಯಗೊಂಡು ಸ್ವಲ್ಪದಲ್ಲೇ ಪ್ರಾಣಪಾಯದಿಂದ ಪಾರಾದ ಘಟನೆ ಬೆಂಗಳೂರಿನ ಹುಳಿಮಾವು ಬಳಿ ಸೋಮವಾರ(ಅ.೧೩)ರಂದು ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬೈಕ್ ಸವಾರರು ಬದುಕಿದ್ದೇ ಪವಾಡವೆಂಬಂತೆ ಕಾಣುತ್ತಿದೆ.
17 ಸೆಕೆಂಡ್ ಗಳ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ನಿಧಾನಗತಿಯಲ್ಲಿ ವಾಹನಗಳು ಸಂಚರಿಸುತ್ತಿರುವಾಗ ಇದಕ್ಕಿದ್ದಂತೆ ಹಿಂದಿನಿಂದ ಬಂದ ಕಾರು, ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು, ಸವಾರರು ಕಾರಿನ ಬಾನೆಟ್ ಮೇಲೆ ಬಿದ್ದು, ತರೆಗೆಲೆಗಳಂತೆ ಕೆಳಗೆ ಬಿದ್ದಿದ್ದಾರೆ.

ಕೆಲವರು ಇಕ್ಕಟ್ಟಾದ ರಸ್ತೆಯ ಎಡಭಾಗಕ್ಕೆ ಬಿದ್ದರೆ, ಇತರರು ವಾಹನಗಳ ಮಧ್ಯೆ ಬಿದ್ದಿದ್ದಾರೆ. ಇದನ್ನು ನೋಡಿದ ಇತರರು ತಕ್ಷಣ ನೆರವಿಗೆ ಧಾವಿಸಿದ್ದು, ಬೈಕ್ ಸವಾರರನ್ನು ರಕ್ಷಿಸಿದ್ದಾರೆ ಎಂದು ವರದಿ ತಿಳಿಸಿದೆ.

See also  KSRTC ಬಸ್‌ ನಲ್ಲಿ ಪ್ರಯಾಣಿಕನಿಗೆ ಚಾಕು ಇರಿದು ಆರೋಪಿ ಪರಾರಿ..! ಪತ್ನಿಯ ಎದುರಿಗೇ ಪ್ರಾಣ ಬಿಟ್ಟ ಪತಿಯ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget