ಕ್ರೈಂಬೆಂಗಳೂರುವೈರಲ್ ನ್ಯೂಸ್

ಅಶ್ಲೀಲ ವಿಡಿಯೋ ತೋರಿಸಿ ಹಾಗೆಯೇ ಮಾಡುವಂತೆ ಗಂಡನಿಂದ ಚಿತ್ರಹಿಂಸೆ..! ಪೆಟ್ರೋಲ್ ಸುರಿದುಕೊಂಡು ಮಹಿಳೆ ಆತ್ಮಹತ್ಯೆ..!

157

ನ್ಯೂಸ್ ನಾಟೌಟ್: ನಿತ್ಯ ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ಗಂಡನ ನಡೆಗೆ ಬೇಸತ್ತು ಮಹಿಳೆಯೊಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಎಂಬಲ್ಲಿನ ಅಕ್ಷಯನಗರದಲ್ಲಿ ನಡೆದಿದೆ.

ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಈಕೆಯ ಪತಿ ಶ್ರೀಹರಿ ಎಂಬಾತ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಟಾರ್ಚರ್ ಕೊಡುತ್ತಿದ್ದ. ಅಲ್ಲದೇ ಆಕೆಯ ಮುಂದೆಯೇ ಇನ್ನೊಂದು ಹುಡುಗಿಯ ಜೊತೆ ಸಲುಗೆ ಬೆಳೆಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ. ಎರಡು ತಿಂಗಳಿಂದ ಡೈವರ್ಸ್ ಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶ್ರೀಹರಿ ಹಾಗೂ ಅನುಷಾಗೆ ಮದುವೆಯಾಗಿ 5 ವರ್ಷ ಆಗಿತ್ತು. ಒಂದು ಮಗು ಕೂಡ ಇತ್ತು. ಹಾಗಿದ್ದರೂ ಪತಿ ಶ್ರೀಹರಿ ಇತರೆ ಹುಡುಗಿಯರ ಜೊತೆ ಸಹವಾಸ ಮಾಡಿದ್ದ. ಮನೆಯ ವಾಶ್ ರೂಂನಿಂದ ಗಂಡನಿಗೆ ವೀಡಿಯೋ ಕಾಲ್ ಮಾಡಿ ಪೆಟ್ರೋಲ್ ಸುರಿದುಕೊಳ್ಳುತ್ತೇನೆ ಎಂದು ಹೆಂಡತಿ ಹೇಳಿದ್ದಳು. ಈ ವೇಳೆ ರಕ್ಷಣೆ ಮಾಡದೇ ನಿರ್ಲಕ್ಷ್ಯ ಮಾಡಿರುವುದಾಗಿ ಮೃತ ಅನುಷಾ ಕುಟುಂಬಸ್ಥರು ಆರೋಪಿಸಿದ್ದಾರೆ.

Click

https://newsnotout.com/2024/09/darshan-thugudeepa-ganesha-chaturti-kannada-news-ballary-jail/
https://newsnotout.com/2024/09/darshan-thugudeepa-kannada-news-tv-fixed-to-the-jail-cell-kannada-news/
https://newsnotout.com/2024/09/ganapathi-kannada-news-auto-9-young-people/
https://newsnotout.com/2024/09/puttur-bjp-leader-arun-kumar-puttila-kannada-news-police-case-kannada-news/
https://newsnotout.com/2024/09/13-year-old-balun-and-baby-nomore-kannada-news-play-kit/
See also  ಊಟದ ವಿಚಾರದಲ್ಲಿ ಜಗಳ, ಅರ್ಧಕ್ಕೆ ನಿಂತ ಮದುವೆ..! ಪೊಲೀಸ್ ಠಾಣೆಯಲ್ಲಿ ಮತ್ತೆ ವಿವಾಹ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget