Latestಸಿನಿಮಾ

ಆನ್​ಲೈನ್​ನಲ್ಲಿ ಲೀಕ್ ಆಯ್ತು ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ‘ಛಾವ’ ಸಿನಿಮಾ!!; ನೂರಾರು ಕೋಟಿ ಬಿಸ್ನೆಸ್​ಗೆ ಹೊಡೆತ!

351

ನ್ಯೂಸ್‌ ನಾಟೌಟ್ : ‘ಛಾವ’ ಸಿನಿಮಾ ಇಡೀ ದೇಶದಲ್ಲಿಯೇ ಭಾರಿ ಸಂಚಲನವನ್ನುಂಟು ಮಾಡಿದ ಸಿನಿಮಾ. ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಈ ಸಿನಿಮಾ ಹವಾ ಕ್ರಿಯೇಟ್ ಮಾಡುತ್ತಿದೆ. ಈಗಾಗ್ಲೇ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 562 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿದೇಶದ ಕಲೆಕ್ಷನ್ ಕೂಡ ಸೇರಿಸಿದರೆ ಒಟ್ಟು ಮೊತ್ತು ದೊಡ್ಡದಾಗಲಿದೆ. ಐತಿಹಾಸಿಕ ಕಥೆ ಇರುವ ಈ ಸಿನಿಮಾದಿಂದ ವಿಕ್ಕಿ ಕೌಶಲ್ ಅವರು ದೊಡ್ಡ ಹೆಸರು ಮಾಡಿದ್ದಾರೆ. ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗ ಚಿತ್ರತಂಡಕ್ಕೆ  ಪೈರಸಿ ಸಮಸ್ಯೆ ಎದುರಾಗಿದೆ. ಹೌದು,  ಈ ಸಿನಿಮಾ ಇದೀಗ ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಇದರಿಂದ ನೂರಾರು ಕೋಟಿ ರೂಪಾಯಿ ವ್ಯವಹಾರಕ್ಕೆ ತೊಂದರೆ ಆಗುತ್ತಿದೆ.

‘ಛಾವ’ ಸಿನಿಮಾ ಚಿತ್ರಮಂದಿರದಲ್ಲಿ ಎಷ್ಟು ಬಾಚಿಕೊಳ್ಳಬೇಕೋ ಅಷ್ಟು ಹಣವನ್ನು ಈಗಾಗಲೇ ಬಾಚಿಕೊಂಡಿದೆ. ಇನ್ನೇನಿದ್ದರೂ ಒಟಿಟಿಯಲ್ಲಿ ಈ ಸಿನಿಮಾ ಧೂಳೆಬ್ಬಿಸಬೇಕಾಗಿತ್ತು. ಮೂಲಗಳ ಪ್ರಕಾರ, ಏಪ್ರಿಲ್​ 11ರಂದು ನೆಟ್​ಪ್ಲಿಕ್ಸ್​ ಮೂಲಕ ಈ ಸಿನಿಮಾ ಒಟಿಟಿಗೆ ಕಾಲಿಡಲಿದೆ. ಆದರೆ ಅದಕ್ಕೂ ಮುನ್ನ ಆನ್​ಲೈನ್​​ನಲ್ಲಿ ಸಿನಿಮಾ ಲೀಕ್ ಆಗಿದ್ದರಿಂದ ಒಟಿಟಿ ಬಿಸ್ನೆಸ್ ಮೇಲೆ ಖಂಡಿತಾ ಪೆಟ್ಟು ಬೀಳಲಿದೆ.ಇದು ಸೂಪರ್​ ಹಿಟ್ ಸಿನಿಮಾ ಆದ್ದರಿಂದ ದೊಡ್ಡ ಮೊತ್ತಕ್ಕೆ ಒಟಿಟಿ ಡೀಲ್ ನಡೆದಿರುತ್ತದೆ. ಆ ಮೊತ್ತ ರಿಕವರಿ ಆಗಬೇಕು ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ವೀವ್ಸ್ ಬರಬೇಕು. ಆದರೆ ಒಟಿಟಿಗೆ ಬರುವುದಕ್ಕೂ ಮುನ್ನವೇ ಆನ್​ಲೈನ್​ನಲ್ಲಿ ಲೀಕ್ ಆಗಿರುವುದರಿಂದ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಪೈರಸಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಸ್ಥೆಯ ಸಿಇಓ ರಜತ್ ರಾಹುಲ್ ಹಕ್ಸರ್ ಅವರು ಮುಂಬೈನ ಸೌತ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 1818 ಲಿಂಕ್​ಗಳ ಮೂಲಕ ಪೈರಸಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ತೆಲುಗು ಭಾಷೆಗೂ ಡಬ್ ಆಗಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದರು.

See also  ಸುಳ್ಯ: ಅಜ್ಜಿಯೇ ಆಸರೆಯಾಗಿರುವ ವಿದ್ಯಾರ್ಥಿಗೆ ಡಿಬಾಸ್ ಅಭಿಮಾನಿಗಳಿಂದ ಸಹಾಯಹಸ್ತ, ಪುಸ್ತಕ- ಬ್ಯಾಗ್- ಕೊಡೆ- ಚಪ್ಪಲ್ ನೀಡಿ ನೆರವು
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget