ಕ್ರೈಂದಕ್ಷಿಣ ಕನ್ನಡರಾಜ್ಯವೈರಲ್ ನ್ಯೂಸ್

ಮಂಗಳೂರು: ಮಹಿಳೆಯರ ರಕ್ಷಣೆಗೆ ಕಿರುಕತ್ತಿ ಕೊಡಬೇಕು, VHP ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿಕೆ

ನ್ಯೂಸ್ ನಾಟೌಟ್: ಪಂಜಾಬ್‌ನಲ್ಲಿ ಮಹಿಳೆಯರು ತಮ್ಮ ರಕ್ಷಣೆಗೆ ಧರಿಸುವ ಕಿರುಕತ್ತಿಯಂತೆ (ಕಿರ್ಪಣ್) ಕರ್ನಾಟಕದಲ್ಲಿಯೂ ಮಹಿಳೆಯರು ತಮ್ಮ ಆತ್ಮರಕ್ಷಣೆಗೆ ಕಿರುಕತ್ತಿ ಹೊಂದಲು ಕಾನೂನು ತರಬೇಕು. ಯುವತಿಯರ ಆತ್ಮರಕ್ಷಣೆಗೆ ತರಬೇತಿ ಶಿಬಿರ ಆಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದುVHP ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿರಂಜನ ಹಿರೇಮಠ ಪುತ್ರಿ ಹುಬ್ಬಳ್ಳಿ ಕಾಲೇಜಿನ ಎಂಸಿಎ ಪ್ರಥಮ ವರ್ಷದ ವಿದ್ಯಾರ್ಥಿನಿ ನೇಹಾಳ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ. ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರಣ್ ಪಂಪ್ ವೆಲ್, ಮತಾಂಧ ಫಯಾಜ್ 9 ಬಾರಿ ಇರಿದು ನೇಹಾಳನ್ನು ಕೊಲೆ ಮಾಡಿದ್ದಾನೆ. ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯ ಹಿಂದೇ ಫಯಾಜ್‌ನ ಹಿಂದೆ ಆತನ ಸ್ನೇಹಿತರು, ಮುಸ್ಲಿಂ ಜಿಹಾದಿ ಸಂಘಟನೆಗಳ ಕೈವಾಡವಿರುವ ಶಂಕೆ ಇದೆ. ಇಂತಹ ಲವ್ ಜಿಹಾದ್ ಘಟನೆಗಳು ಹೆಚ್ಚುತ್ತಿವೆ. ಹಾಗಾಗಿ ಎನ್‌ಐಎ ತನಿಖೆಯಾಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಅನಂತರ ಹಿಂದೂಗಳ ಮೇಲೆ ಇಸ್ಲಾಮಿಕ್ ಆಕ್ರಮಣಗಳು ನಡೆಯುತ್ತಲೇ ಇದೆ. ಹಿಂದೂಗಳಲ್ಲಿ ಭಯ ಹುಟ್ಟಿಸಿ ರಾಜ್ಯವನ್ನು ಇಸ್ಲಾಮೀಕರಣಗೊಳಿಸಲು ಮೂಲಭೂತವಾದಿ ಗುಂಪುಗಳ ಸಂಚು ರೂಪಿಸುತ್ತಿವೆ. ಯುವತಿಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಎಚ್ ಪಿ ಪ್ರಾಂತ ಸಹಸಂಯೋಜಕ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.

Related posts

ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯ ಮಧ್ಯೆ ಮಲಗಿದ್ದ ವ್ಯಕ್ತಿ..! ಆತನನ್ನು ಬಂಧಿಸಿದ ಪೊಲೀಸರು..! ಇಲ್ಲಿದೆ ವೈರಲ್ ವಿಡಿಯೋ

ನಾಲಗೆಯ ಮೇಲೆ ಪ್ರಿಯತಮೆಯ ಹೆಸರು ಹಚ್ಚೆ ಹಾಕಿಸಿಕೊಂಡ ಪಾಗಲ್ ಪ್ರೇಮಿ..! ಇಲ್ಲಿದೆ ವೈರಲ್ ವಿಡಿಯೋ

ಸುಳ್ಯದಲ್ಲಿ ತಲೆ ಎತ್ತಲಿದೆ 50 ಕೋಟಿ ರೂ. ವೆಚ್ಚದ ಬೃಹತ್‌ ಕ್ಯಾನ್ಸರ್ ಆಸ್ಪತ್ರೆ..! 12.5 ಎಕರೆ ಜಮೀನಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಸ್ಪತ್ರೆಗೆ ರೂಪುರೇಷೆ