ಕರಾವಳಿನಮ್ಮ ತುಳುವೇರ್

ನವೀನ್‌ ಡಿ. ಪಡೀಲ್‌ಗೆ ಮಾತೃವಿಯೋಗ

324

ನ್ಯೂಸ್‌ ನಾಟೌಟ್‌: ತುಳು ರಂಗಭೂಮಿ ಕಲಾವಿದ, ನಟ, ಕುಸಲ್ದರಸೆ ಖ್ಯಾತಿಯ ನವೀನ್ ಡಿ. ಪಡೀಲ್ ಅವರ ತಾಯಿ ಸೇಸಮ್ಮ ಕೋಟ್ಯಾನ್ (80) ಅನಾರೋಗ್ಯದಿಂದ ನಗರದ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು.

ಅವರು ಇಬ್ಬರು ಪುತ್ರರಾದ ನವೀನ್‌, ದಯಾನಂದ ಮತ್ತು ಓರ್ವ ಪುತ್ರಿ ಮೋಹಿನಿ ಅವರನ್ನು ಅಗಲಿದ್ದಾರೆ. ನವೀನ್ ಡಿ.ಪಡೀಲ್ ಅವರ ಪಡೀಲ್‌ನ ಮನೆಯಲ್ಲೇ ವಾಸವಿದ್ದ ಸೇಸಮ್ಮ ಕೋಟ್ಯಾನ್ ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ಮೂಳೆ ಮುರಿತಕ್ಕೊಳಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಅವರ ಆರೋಗ್ಯ ಸುಧಾರಿಸಿತ್ತು. ಇದೀಗ ಎರಡು ತಿಂಗಳಿಂದ ಮತ್ತೆ ಅವರ ಆರೋಗ್ಯ ಗದಗೆಟ್ಟಿತ್ತು ಎಂದು ತಿಳಿದು ಬಂದಿದೆ.

See also  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್‌. ರವಿ ಕುಮಾರ್,ಸಿಇಒ ಡಾ. ಕುಮಾರ್ ದಿಢೀರ್ ವರ್ಗಾವಣೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget