ನ್ಯೂಸ್ ನಾಟೌಟ್ : ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸವಾರ ಗಾಯಗೊಂಡ ಘಟನೆ ಸುಳ್ಯದ ಜ್ಯೋತಿ ಸರ್ಕಲ್ ಬಳಿ ಇಂದು ಸಂಜೆ (ಸೆ. 12) ನಡೆದಿದೆ.
ಬೈಕ್ ಡಿಕ್ಕಿಯಾದ ರಭಸಕ್ಕೆ ರಸ್ತೆ ಬದಿ ನಿಲ್ಲಿಸಿದ್ದ ಓಮಿನಿ ಕಾರ್ ಜಖಂಗೊಂಡಿದೆ. ಹಳೆ ಗೇಟು ಭಾಗದಿಂದ ಬರುತ್ತಿದ್ದ ಶೈನ್ ದ್ವಿಚಕ್ರವಾಹನ ಸುಳ್ಯ ಕಡೆಯಿಂದ ಬರುತ್ತಿದ್ದ ಬುಲೆಟ್ ವಾಹನಕ್ಕೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಓಮಿನಿ ಕಾರಿನ ಹಿಂಭಾಗಕ್ಕೆ ಗುದ್ದಿದೆ.
ಸುಳ್ಯ ಅಗ್ನಿಶಾಮಕದಳಕ್ಕೆ ಸೇರಿದ ಸಿಬ್ಬಂದಿಯೊಬ್ಬರು ಜ್ಯೋತಿ ವೃತ್ತದ ಬಳಿ ಇರುವ ಬಸ್ಸು ನಿಲ್ದಾಣದ ಪಕ್ಕ ತಮ್ಮ ಓಮಿನಿ ಕಾರನ್ನು ನಿಲ್ಲಿಸಿ ಹೂ ತರಲೆಂದು ಪಕ್ಕದ ಹೂವಿನ ಅಂಗಡಿಗೆ ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಬುಲೆಟ್ ಸವಾರನಿಗೆ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.