ಕರಾವಳಿಕೊಡಗುಕ್ರೈಂದೇಶ-ಪ್ರಪಂಚ

ವಯನಾಡಿನ ಆನೆ ದಾಳಿಯಲ್ಲಿ ವ್ಯಕ್ತಿಯ ಹತ್ಯೆ ಪ್ರಕರಣ: ಕಾಡಾನೆ ಕೊಡಗಿನಲ್ಲಿ ಇರುವ ಸುಳಿವು ಸಿಕ್ಕಿದ್ದೇಗೆ..? ಕಾರ್ಯಾಚರಣೆ ಮತ್ತಷ್ಟು ಚುರುಕು

ನ್ಯೂಸ್ ನಾಟೌಟ್: ಕೇರಳದ ವಯನಾಡಿನಲ್ಲಿ ವ್ಯಕ್ತಿ ಒಬ್ಬರನ್ನು ಇತ್ತೀಚೆಗೆ ಹತ್ಯೆ ಮಾಡಿದ್ದ ಕಾಡಾನೆಯ ಸೆರಗೆ ಕೊಡಗು ಜಿಲ್ಲೆಯ ನಾಗರಹೊಳೆ ಅಭಯಾರಣ್ಯದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಮಖಾನ್ ಹೆಸರಿನ ಕಾಡಾನೆ ಸದ್ಯ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಓಡಾಡುತ್ತಿದೆ ಎಂಬುದು ರೇಡಿಯೋ ಕಾಲರ ಮೂಲಕ ತಿಳಿದು ಬಂದಿದೆ ಎನ್ನಲಾಗಿದೆ. ನಾಗರಹೊಳೆಯ ನಾಣಚ್ಚಿ, ಹುಲಿಕಲ್ಲು, ಆಲಂದೋಡು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಈ ಆನೆಗೆ ಹಾಸನದ ಬೇಲೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿದ್ದರು.

ನಂತರ ಅದನ್ನು ಚಾಮರಾಜನಗರ ವ್ಯಾಪ್ತಿಯ ಕಾಡಿನಲ್ಲಿ ಬಿಡಲಾಗಿತ್ತು. ಅದು ಅಲ್ಲಿಂದ ಕೇರಳದ ವಯನಾಡಿಗೆ ತೆರಳಿತ್ತು ಎನ್ನಲಾಗಿದೆ. ಕೇರಳದ ವಯನಾಡಿನಲ್ಲಿ ಫೆಬ್ರವರಿ 10 ರಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರ ವಾಗಿರುವ ವಯನಾಡಿನಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಿದ್ದರಿಂದ ಮತ್ತು ಅದು ಕರ್ನಾಟಕದಲ್ಲಿ ರೇಡಿಯೋ ಕಾಲರ್ ಅಳವಡಿಸಿರುವ ಹಾನಿಯಾಗಿರುವ ಕಾರಣ ಇಲ್ಲಿನ ಸರ್ಕಾರ ಮೃತ ವ್ಯಕ್ತಿಯ ಕುಟುಂಬದವರಿಗೆ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು. ಇದು ರಾಜ್ಯದಲ್ಲಿ ತೀವ್ರ ರಾಜಕೀಯ ತಿರುವಿಗೆ ಕಾರಣವಾಗಿತ್ತು. ಇದೀಗ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಆನೆ ಇರುವ ಸುಳಿವು ಸಿಕ್ಕ ಕಾರಣ ಕಾರ್ಯಾಚರಣೆ ನಡೆಸಲಾಗುತ್ತಿದೆ.

Related posts

ನಟ ದರ್ಶನ್‌, ಪವಿತ್ರಾ ಗೌಡ ಸೇರಿ 17 ಆರೋಪಿಗಳಿಗೆ ಮತ್ತೆ 14 ದಿನ ಜೈಲು..! ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರೋಪಿಗಳು ಕೋರ್ಟ್ ಗೆ ಹಾಜರು..!

ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತನ ಶವ ಪತ್ತೆ..! ಮಹಿಳೆಯ ಬಂಧನ..!

ಗಣೇಶ ಮೆರವಣಿಗೆ ವೇಳೆ ಮಸೀದಿ ಬಾಗಿಲಿಗೆ ಮಂಗಳಾರತಿ ಮಾಡಿದ್ದೇಕೆ..? ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದೇಕೆ? ಅಷ್ಟಕ್ಕೂ ಅಲ್ಲಿ ಏನು ನಡೆಯಿತು?