ಕರಾವಳಿ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್,ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

251

ನ್ಯೂಸ್ ನಾಟೌಟ್: ಸ್ಯಾಂಡಲ್​​ವುಡ್​​ನ ಕ್ಯೂಟ್​​ ಕಪಲ್ ಎಂದೇ ಕರೆಸಿಕೊಂಡಿರುವ​​ ಸಿಂಹ ಪ್ರಿಯ ದಂಪತಿ ಉಡುಪಿ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ನೆಲದ ಮೇಲೆ ಊಟ ಮಾಡಿ ನೆಲಭೋಜನ ಹರಕೆಯ ಸೇವೆಯನ್ನು ತೀರಿಸಿದ್ದಾರೆ.

ಜನವರಿ 26ರಂದು ಗಣರಾಜ್ಯ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಸರಳ ವಿವಾಹದ ಮೂಲಕ ಗಮನ ಸೆಳೆದಿದ್ದರು. ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಇಬ್ಬರ ಮದುವೆ ಸಮಾರಂಭ ನಡೆದಿತ್ತು.

ಇತ್ತೀಚೆಗಷ್ಟೇ ಈ ಜೋಡಿ ಮಂತ್ರಾಲಯದ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದರು.ಇದೀಗ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನೆಲಭೋಜನ ಹರಕೆಯನ್ನು ತೀರಿಸಿದ್ದಾರೆ.

ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿದ  ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ ಕೃಷ್ಣದೇವರ ದರ್ಶನ ಪಡೆದರು. ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ನೆಲಭೋಜನ ಹರಕೆಯ ಸೇವೆಯನ್ನು ತೀರಿಸಿದರು.ಕಲಾವಿದ ಮಧೂರು ನಾರಾಯಣ ಶರಳಾಯ ಉಪಸ್ಥಿತರಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

See also  ಈ ವಿಶ್ವವಿದ್ಯಾಲಯದಲ್ಲಿ ಮುಟ್ಟಿನ ಸಮಯದಲ್ಲೂ ರಜೆ ಸಿಗುತ್ತೆ,ದೇಶದಲ್ಲೇ ಮೊದಲ ಬಾರಿಗೆ ರಜೆ ಘೋಷಿಸಿದ ಕೇರಳ ಶಿಕ್ಷಣ ಇಲಾಖೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget