ವೈರಲ್ ನ್ಯೂಸ್

ವರ್ತೂರ್​ ಸಂತೋಷ್ ನನ್ನು ಸನ್ಮಾನಿಸಿದ್ದ ಎಸ್ ​ಐ ರಾತ್ರೋರಾತ್ರಿ ವರ್ಗಾವಣೆ..! ಏನಿದು ಅಚ್ಚರಿಯ ಬೆಳವಣಿಗೆ..?

228
Pc cr; One india

ನ್ಯೂಸ್ ನಾಟೌಟ್ : ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಹಳ್ಳಿಕಾರ್‌ ವರ್ತೂರು ಸಂತೋಷ್‌ ದಿನೇ ದಿನೇ ಯಾವುದಾದರೊಂದು ವಿಷಯದಿಂದ ಸುದ್ದಿಯಲ್ಲಿದ್ದಾರೆ. ಈಗ ವರ್ತೂರು ಸಂತೋಷ್‌ ನನ್ನು ಸನ್ಮಾನ ಮಾಡಲು ಬಂದಿದ್ದ ಸಬ್‌ಇನ್ಸ್‌ಪೆಕ್ಟರ್‌ ನನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ.

ಬಿಗ್ ಬಾಸ್ ಸ್ಪರ್ಧಿ ವರ್ತೂರ್​​ ಸಂತೋಷ್​​ಗೆ ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನ ಮಾಡಿದ್ದ ಸಬ್ ಇನ್ಸ್ಪೆಕ್ಟರ್ ನನ್ನು ರಾತ್ರೋರಾತ್ರಿ ವಗಾರ್ವಣೆ ಮಾಡಲಾಗಿದ್ದು, ವರ್ತೂರು ಠಾಣೆ ಎಸ್​ಐ ಆಗಿದ್ದ ತಿಮ್ಮರಾಯಪ್ಪ ನನ್ನು ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಸಬ್ ಇನ್ಸ್ಪೆಕ್ಟರ್ ನನ್ನು ವರ್ತೂರ್ ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಇನ್ನೂ ವರ್ತೂರು ಸಂತೋಷ್‌ ನಿವಾಸಕ್ಕೆ ತೆರಳಿ ಎಸ್​ಐ ತಿಮ್ಮರಾಯಪ್ಪ ಸನ್ಮಾನ ಮಾಡಿದ್ದರು. ಈ ವೇಳೆ ಪೊಲೀಸ್ ಸಮವಸ್ತ್ರ ಧರಿಸಿದ್ದರು. ಇನ್ನೂ ಈ ವೇಳೆ ಸಬ್ ಇನ್ಸ್ ಪೆಕ್ಟರ್ ಅವರೊಂದಿಗೆ ಕೆಲ ಕ್ರೈಂ ಸಿಬ್ಬಂದಿಗಳು ಸನ್ಮಾನದ ವೇಳೆ ಹಾಜರಿದ್ದರು. ಇನ್ನೂ ಜೈಲಿಗೆ ಹೋಗಿ ಬಂದ ಆರೋಪಿಗೆ ಎಸ್​ಐ ತಿಮ್ಮರಾಯಪ್ಪ ಸಮವಸ್ತ್ರದಲ್ಲಿ ಅವರಿದ್ದ ಸ್ಥಳಕ್ಕೆ ಹೋಗಿ ಸನ್ಮಾನ ಮಾಡುವ ಅಗತ್ಯವೇನಿತ್ತು ಎಂದು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು ಎನ್ನಲಾಗಿದೆ.

ಬಿಗ್‌ ಬಾಸ್‌ ನಿಂದ ಬಂದ ಬಳಿಕ ನೇರ ಮಾತಿನಿಂದ ಹೆಚ್ಚು ಸುದ್ದಿಯಾಗುತ್ತಿರುವ ವರ್ತೂರ್‌ ಸಂತೋಷ್‌ ಎಸ್​ಐ ತಿಮ್ಮರಾಯಪ್ಪ ಸನ್ಮಾನ ಮಾಡಿ ಅಭಿನಂದನೆ ತಿಳಿಸಿದ್ದರು. ಇದರ ಬೆನ್ನಲ್ಲೇ ಎಸ್​ಪಿ ಅವರನ್ನು ವರ್ಗಾವಣೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

https://newsnotout.com/2024/02/congress-guarantee-for-rikshaw-drivers/
See also  "ಯಾರೋ ಕಿತ್ತೋದ್‌ ನನ್ಮಗ ಟಿವಿಯಲ್ಲಿ ತಗಲಾಕೊಂಡ" ..! ವರ್ತೂರು ಸಂತೋಷ್ ಹುಲಿ ಉಗುರಿನ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಜಗ್ಗೇಶ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget