ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ವರ್ತೂರ್ ಸಂತೋಷ್ ಮತ್ತು ಜಗ್ಗೇಶ್ ಜಟಾಪಟಿ..! ಕೇಸ್‌ ದಾಖಲಿಸಿದ ನಟ, ಎಫ್ ಐ ಆರ್ ನಲ್ಲೇನಿದೆ..?

29
Spread the love

ನ್ಯೂಸ್‌ನಾಟೌಟ್‌: ವರ್ತೂರ್ ಸಂತೋಷ್ ವಿಚಾರದಲ್ಲಿ ನಟ ಜಗ್ಗೇಶ್ ಬಗ್ಗೆ ಸೋಷಿಯಲ್ ಮೀಡಿಯಾ ಅಪಪ್ರಚಾರ ಮಾಡುವವರ ವಿರುದ್ದ ನಟ ಹಾಗೂ ರಾಜ್ಯಸಭಾ ಸಂಸದ ಜಗ್ಗೇಶ್‌ ದೂರು ನೀಡಿದ್ದಾರೆ. ತಮ್ಮ ವಿರುದ್ದ ಅಪಪ್ರಚಾರ ಮಾಡೊ ಕಿಡಿಗೇಡಿಗಳ ವಿರುದ್ಧ ಜಗ್ಗೇಶ್ ಎಫ್‌ಐಅರ್‌ ದಾಖಲು ಮಾಡಿದ್ದಾರೆ.

ಹುಲಿ ಉಗುರಿನ ವಿಚಾರವಾಗಿ ರಂಗನಾಯಕ ಸಿನಿಮಾ ಕಾರ್ಯಕ್ರಮದಲ್ಲಿ ಜಗ್ಗೇಶ್‌ ಮಾತನಾಡಿದ್ದರು. ಇಲ್ಲಿ ಮಾತನಾಡಿದ ವಿಚಾರವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಸಿನಿಮಾ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಗ್ಗೇಶ್‌, ವರ್ತೂರ್‌ ಸಂತೋಷ್‌ ಗೆ ಬಳಸಿದ ಭಾಷೆಯ ಕುರಿತಾಗಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ವರ್ತೂರು ಸಂತೋಷ್‌ ಕೂಡ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದರು.

ಅದರೆ, ತಾವು ಗ್ರಾಮೀಣ ಭಾಷೆಯ ರೂಪದಲ್ಲಿ ಬಳಸಿದ ಪದವನ್ನು ಜಾತಿ ನಿಂದನೆಯ ರೂಪದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಜಗ್ಗೇಶ್‌ ದೂರು ನೀಡಿದ್ದಾರೆ. “ಫೆ.15 ರಂದು ಸಂಜೆ 6.30ಕ್ಕೆ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ರಂಗನಾಯಕ ಎಂಬ ನನ್ನ ಕನ್ನಡ ಚಿತ್ರದ ಮಾಧ್ಯಮ ಸಂವಾದ ಕಾರ್ಯಕ್ರಮವಿತ್ತು. ಈ ವೇಳೆ ಈ ಹಿಂದೆ ನನ್ನ ಹುಲಿ ಉಗುರಿನ ಬಗ್ಗೆ ಆದ ಘಟನೆಯನ್ನು ಮಾಧ್ಯಮದಲ್ಲಿ ತೋರಿಸಿದ್ದ ಬಗ್ಗೆ ಹಾಗೂ ಯಾರೋ ಒಬ್ಬ ಕಿತ್ತೋದವನು (ಇದು ಗ್ರಾಮೀಣ ಭಾಷೆ) ಸಿಕ್ಕಿದ ಪ್ರಯುಕ್ತ ಅಂದರೆ, ಈ ಹುಲಿ ಉಗುರಿನ ಘಟನೆಯಲ್ಲಿ ನೂರಾರು ಮಂದಿ ಸಮಸ್ಯೆ ಅನುಭವಿಸಿದ್ದಾರೆ ಎನ್ನುವ ಅರ್ಥದಲ್ಲಿ ಹಾಸ್ಯವಾಗಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದೆ.

ಆದರೆ, ಇದನ್ನೀಗ ಕೆಟ್ಟ ಪ್ರಚಾರದ ಉದ್ದೇಶದಿಂದ ನನ್ನ ಸಂಪೂರ್ಣ ವಿಚಾರ ತಿರುಚಿ ಜಾತಿ ನಿಂದನೆ, ವ್ಯಕ್ತಿ ನಿಂದನೆ ಎಂದು ಪ್ರಚಾರ ಪಡೆದು ನನ್ನ ತೇಜೋವಧಗೆ ಕೆಲ ಕಿಡಿಗೇಡಿಗಳು ಯತ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಕೆಲವು ಪ್ರಚಾರ ಪ್ರಿಯರು ಇಂಥ ವಿಷಯ ಕಾಯುತ್ತಿರುತ್ತಾರೆ. ಇಂಥವರು ನನ್ನ ಸಿಕ್ಕಿಸಿ, ಜಾತಿ ನಿಂದನೆ ಎಂದಿದ್ದಲ್ಲದೆ, ಮನುಷ್ಯತ್ವದಲ್ಲೇ ಬಳಸದ ಕೆಟ್ಟ ಶಬ್ದ ಬಳಕೆ ಹಾಗೂ ವೈಕ್ತಿಕವಾಗಿ ಹ * ಲ್ಲೆ, ಮನೆ ಮುತ್ತಿಗೆ, ಅವಾಚ್ಯ ಶಬ್ದ ಪ್ರಯೋಗ, ಮುಖಕ್ಕೆ ಮಸಿ ಬಳಿಯುವ ಬೆದರಿಕೆ ಒಡ್ಡಿದ್ದಾರೆ.

ನಾನು ಯಾರ ಬಗ್ಗೆಯೂ ಅಥವಾ ಜಾತಿಬಗ್ಗೆ, ಅಥವಾ ವ್ಯಕ್ತಿಯ ಬಗ್ಗೆ ನಾನು ಮಾತನಾಡಿರುವುದಿಲ್ಲ. ಬದಲಾಗಿ ನನ್ನ ವೈಯಕ್ತಿಕ ಅನುಭವ ಮಾಧ್ಯಮದ ಮುಂದೆ ಹೇಳಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ. ಸಮಾಜ ಸ್ವಾಸ್ತ್ಯ, ಜಾತಿ ಗಲಭೆ, ತಪ್ಪು ಸಂದೇಶ, ಹಲ್ಲೆ ಬೆದರಿಕೆ ಮಾಡಿರುವ ಆನೇಕಲ್‌ ಹೆಬ್ಬಗೋಡಿಯ ನಾರಾಯಣಸ್ವಾಮಿ ಹಾಗೂ ಅವನ ಮಾತು ಅನುಸರಿಸಿ ವಿಡಿಯೋ ಮಾಡಿದ (ಹೆಸರು ಗೊತ್ತಿಲ್ಲ ವಿಡಿಯೋ ಸಾಕ್ಷಿ ಇದೆ) ಇವರುಗಳ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇನೆ” ಎಂದು ಎಫ್‌ಐಆರ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

See also  "ನನ್ನ ಭೇಟಿಗೆ ಬರುವವರು ಆಧಾರ್ ಕಾರ್ಡ್ ತನ್ನಿ" ಎಂದ ನಟಿ ಕಂಗನಾ ರಣಾವತ್..! ಬಿಜೆಪಿ ಸಂಸದೆ ಹೀಗೆ ಹೇಳಿದ್ದೇಕೆ..? ಏನಿದು ವಿವಾದ..?
https://newsnotout.com/2024/02/huccha-venkat-cinema/
  Ad Widget   Ad Widget   Ad Widget