ದೇಶ-ಪ್ರಪಂಚ

ವಾಟ್ಸ್ಯಾಪ್​ನಲ್ಲಿ ಅಪ್ಪಿ ತಪ್ಪಿ ‘Delete For Me’ ಕೊಟ್ಟು ಮುಜುಗರಕ್ಕೆ ಒಳಗಾಗಿದ್ದೀರಾ?ಚಿಂತೆ ಬಿಡಿ!ನೀವೇನು ಮಾಡಬೇಕು ಗೊತ್ತಾ..

ನ್ಯೂಸ್ ನಾಟೌಟ್: ನೀವು ವಾಟ್ಸ್ಯಾಪ್​ನಲ್ಲಿ ಅಪ್ಪಿ ತಪ್ಪಿ ಯಾರಿಗೋ ಕಳುಹಿಸಬೇಕಾದ ಮೇಸೆಜ್ ಯಾರಿಗೋ ಕಳಿಸಿ ಡಿಲೀಟ್ ಫಾರ್ ಮಿ ಕ್ಲಿಕ್ ಮಾಡಿದ್ದೀರಾ?ಒತ್ತಿದ್ರೆ ಇನ್ನು ಚಿಂತೆ ಮಾಡಬೇಕಾಗಿಲ್ಲ.

ವಾಟ್ಸ್ಯಾಪ್ ನಲ್ಲೇ ಇದೆ ಪರಿಹಾರ :

ಮೇಸೆಜ್ ಯಾರಿಗೋ ಹೋಯ್ತೆಂದು ತಕ್ಷಣವೆ ‘Delete For everyone’ ಕೊಡುವ ಬದಲು ‘Delete For Me’ ಕೊಟ್ಟು ಮುಜುಗರ ಅನುಭವಿಸಿದ್ದರೆ ಇನ್ನು ಮುಂದೆ ಅಂತಹ ತೊಂದರೆ ಇಲ್ಲ ಬಿಡಿ. ಹೌದು ಇದೀಗ ವಾಟ್ಸ್ಯಾಪ್ ಅದಕ್ಕೂ ಪರಿಹಾರ ಕಂಡುಹಿಡಿದಿದೆ. ಇನ್ನು ಅವಸರದಲ್ಲಿ ‘Delete For Me’ ಕೊಟ್ಟರೆ ಮುಜುಗರ ಪಡುವ ಆವಶ್ಯಕತೆ ಇಲ್ಲ. ಸದ್ಯದಲ್ಲೇ ಹೊಸ ಅಪ್ಡೇಟ್​ನಲ್ಲಿ ಈ ಫೀಚರ್ ಲಭ್ಯವಾಗಲಿದೆ.


ಹೊಸ ಫೀಚರ್ ಹೇಗಿದೆ?

ಸಂದೇಶ ಡಿಲೀಟ್​ ಆದ ತಕ್ಷಣ ಅಲ್ಲೇ UNDO ಬಟನ್ ಕಾಣಲಿದೆ. ಅದನ್ನು ಒತ್ತಿದ ಕೂಡಲೇ ಆ ಮೆಸೇಜ್​ ಮತ್ತೆ ಕಾಣಿಸಲಿದೆ. ನಂತರ ಅದನ್ನು ಡಿಲೀಟ್​ ಫಾರ್​ ಆಲ್​ ಮಾಡಿಕೊಳ್ಳಬಹುದು. ಈ ಹೊಸ ಫೀಚರ್ ಅನೇಕರನ್ನು ಮುಜುಗರದ ಸನ್ನಿವೇಶಗಳಿಂದ ಪಾರು ಮಾಡುವುದಂತು ಖಂಡಿತ.

Related posts

ಚಾಕೊಲೇಟ್ ಆಮಿಷ ಒಡ್ಡಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ! ಪರಿಚಯಸ್ಥನಿಂದಲೇ ಕೃತ್ಯ!

ಶಾಕಿಂಗ್ ನ್ಯೂಸ್:ಮಸೀದಿಯಲ್ಲಿ ಇಫ್ತಾರ್ ಆಹಾರ ಸೇವಿಸಿದ ಬಳಿಕ ನೂರಕ್ಕೂ ಅಧಿಕ ಮಂದಿ ಅಸ್ವಸ್ಥ:ಆಸ್ಪತ್ರೆಗೆ ದಾಖಲು,ಕೆಲವರು ಗಂಭೀರ  

ಇಸ್ರೇಲ್ ಮೇಲೆ ಉಗ್ರರ ಭೀಕರ ದಾಳಿ, ಜೀವ ಉಳಿಸಿಕೊಳ್ಳಲು ಬಂಕರ್ ನೊಳಗೆ ಅಡಗಿ ಕುಳಿತಿರುವ ಮಂಗಳೂರಿನ ಪ್ರವೀಣ್..!