Latestವೈರಲ್ ನ್ಯೂಸ್

ಈ ವಿಭಿನ್ನ ಮದುವೆ ಆಮಂತ್ರಣಕ್ಕೆ ಎಲ್ಲರೂ ಫಿದಾ..!ಊಟಕ್ಕೆ ಬಳಸುವ ಸ್ಟೀಲ್ ಬಟ್ಟಲಿನ ಮೇಲಿನ ಆಮಂತ್ರಣವೀಗ ಎಲ್ಲೆಡೆ ವೈರಲ್

1.2k

ನ್ಯೂಸ್‌ ನಾಟೌಟ್:ಇಲ್ಲೊಂದು ಮದುವೆ ಆಮಂತ್ರಣ ಪತ್ರಿಕೆಯು ವಿಭಿನ್ನ ರೀತಿಯಲ್ಲಿದ್ದು ಇದೀಗ ಭಾರಿ ವೈರಲ್ ಆಗಿದೆ. ಮದುವೆ-ಉಪನಯನದ ಆಮಂತ್ರಣ ಪತ್ರಿಕೆಗಳು ಪೇಪರ್, ಕಾರ್ಡ್‌ಶೀಟ್ ಗಳ ವಿವಿಧ ವಿನ್ಯಾಸಗಳಲ್ಲಿರುವುದು ಸಾಮಾನ್ಯ ಆದರೆ ಈ ವಿಭಿನ್ನ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆದಿದೆ.

ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟ. ಈ ಒಂದು ಘಳಿಗೆ ಸ್ಮರಣೀಯವಾಗಿರಬೇಕು ಎಂಬ ಉದ್ದೇಶದಿಂದ ಏನಾದರೂ ವಿಭಿನ್ನ ರೀತಿಯಲ್ಲಿ ಮದುವೆಯ ಆಮಂತ್ರಣವಿರಬೇಕು ಎಂದು ಯೋಚನೆಯಲ್ಲಿದ್ದಾಗ ಸೃಷ್ಟಿಯಾಗಿದ್ದೇ ಈ ಆಮಂತ್ರಣ ಎನ್ನುತ್ತಾರೆ ಡಾ.ಪಿ.ಎಸ್.ಹೆಗಡೆ. ಮನೆಯಲ್ಲಿ ಸಾಮಾನ್ಯವಾಗಿ ಊಟಕ್ಕೆ ಬಳಸುವ ಸ್ಟೀಲ್ ಬಟ್ಟಲಿನ ಹಿಂಭಾಗದಲ್ಲಿ ಡಿಜಿಟಲ್ ಪ್ರಿಂಟ್ ಮೂಲಕ ತಮ್ಮ ಮಗಳ ಮದುವೆಯ ಕರೆಯೋಲೆಯನ್ನು ಮುದ್ರಿಸಿ ಮದುವೆಗೆ ಆಮಂತ್ರಿಸಿದ್ದಾರೆ.ಶಿರಸಿ ತಾಲೂಕಿನ ಹೊನ್ನೆಗದ್ದೆಯ ಮಹಾಲಕ್ಷ್ಮೀ ಸತ್ಯನಾರಾಯಣ ಹೆಗಡೆ ಇವರ ಮಗ ಖ್ಯಾತ ಪಶುವೈದ್ಯ ಪರಮೇಶ್ವರ ಎಸ್.ಹೆಗಡೆ (ಡಾ. ಪಿ.ಎಸ್‌.ಹೆಗಡೆ) ಇವರ ಮಗಳ ಮದುವೆಯ ಆಮಂತ್ರಣ ಇದೀಗ ಎಲ್ಲರ ಆಕರ್ಷಣೆಗೆ ಒಳಗಾಗಿದೆ.

ಇದು ಪರಿಸರಕ್ಕೆ ಪೂರಕವಾಗಿದ್ದು, ಪ್ರತಿದಿನದ ಬಳಕೆಗೆ ಅನುಕೂಲವಾಗುವಂತೆ ಸ್ಟೀಲ್ ಬಟ್ಟಲಿನಲ್ಲಿ ಆಮಂತ್ರಣ ಮುದ್ರಿಸಲಾಗಿದೆ.ಇದು ಪರಿಸರಕ್ಕೆ ಹಾನಿಯಾಗದಂತೆ ಪೂರಕವಾಗಿ ಮೂಡಿಬಂದಿದೆ.

See also  ದರ್ಶನ್‌ ಗೆ ಇನ್ನೂ ಆಪರೇಷನ್‌ ಮಾಡಿಲ್ಲ ಯಾಕೆ..? ಹೈಕೋರ್ಟ್‌ ಗೆ ವಕೀಲರಿಂದ ವರದಿ ಸಲ್ಲಿಕೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget