ಕರಾವಳಿ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ಚಿರತೆ ಉಪಟಳ, 8 ತಿಂಗಳ ಹಿಂದೆ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ ಇಂದು ಮನೆ ಅಂಗಳದಲ್ಲೇ ಪ್ರತ್ಯಕ್ಷ,ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ನ್ಯೂಸ್‌ ನಾಟೌಟ್: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆ ಅಂಗಳದಲ್ಲಿಯೇ ಚಿರತೆ ಪ್ರತ್ಯಕ್ಷವಾಗಿದೆ. ಸುಮಾರು 6-8 ತಿಂಗಳ ಹಿಂದೆ ಸಮೀಪದ ದಾರಿಯಲ್ಲಿ‌ ತೆರಳುವಾಗ ಕಂಡಿದ್ದ ಚಿರತೆಯೊಂದು ಈಗ ಸಂಸದರ ಮನೆಗೆ ಹುಡುಕಿಕೊಂಡು ಬಂದಂತಿದೆ.

ಇಂದು ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಉತ್ತರಕನ್ನಡದ ಸಿರಸಿಯ ಕಾಗೇರಿ ಗ್ರಾಮದಲ್ಲಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಯ ಆವರಣಕ್ಕೆ ರಾತ್ರಿ ನಾಯಿ ಹಿಡಿಯಲು ಚಿರತೆ ಬಂದಿರುವುದು ಸೆರೆಯಾಗಿದೆ. ಚಿರತೆ ಬಂದಿರುವುದು ಮೂರು ಪ್ರತ್ಯೇಕ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದು ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದೆ.

ತಾಲೂಕಿನ ಸುತ್ತಮುತ್ತ ಚಿರತೆ ಆಗಾಗ ಪ್ರತ್ಯಕ್ಷವಾಗುತ್ತಿದ್ದು, ಕಳೆದ ನವೆಂಬರನಲ್ಲಿ ಆನೆಗಳ ಹಿಂಡು ಕೂಡ ತೋಟ, ಭತ್ತದ ಗದ್ದೆಗಳಲಲ್ಲಿ ಓಡಾಟ ನಡೆಸಿದ್ದವು. ಈಗ ಚಿರತೆ ಹಳ್ಳಿ, ಕಾಡೆನ್ನದೇ ಓಡಾಟ ನಡೆಸಿದೆ.

Related posts

ಸಂಪಾಜೆ:ಕಾರು -ಬಸ್ ನಡುವೆ ಭೀಕರ ಅಪಘಾತ:ಆರಕ್ಕೇರಿದ ಸಾವಿನ ಸಂಖ್ಯೆ,ಇಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಸುಳ್ಯ: ಬೈಕ್ ಗಳ ನಡುವೆ ಡಿಕ್ಕಿ, ತಾಯಿ, ಮಗು ಪವಾಡಸದೃಶವಾಗಿ ಪಾರು

ಫುಟ್ಬಾಲ್ ನಲ್ಲಿ ಗಿನ್ನಿಸ್ ದಾಖಲೆ ಸಾಧಿಸಿದ ಮಂಗಳೂರು ಹುಡುಗ,ವಿಶ್ವದ ಇಬ್ಬರ ದಾಖಲೆ ಮುರಿದು ಸಾಧನೆ