ನ್ಯೂಸ್ ನಾಟೌಟ್:ರಸ್ತೆಯಲ್ಲಿ ಗುಂಡಿಗಳನ್ನು (Pathole) ಕಂಡ್ರೆ ಸಾಕು, ಸರ್ಕಾರಕ್ಕೆ ಹಿಡಿ ಶಾಪ ಹಾಕುವವರೇ ಹೆಚ್ಚು.ಕಲ್ಲು ಮುಳ್ಳುಗಳಿದ್ದರೂ ಬದಿಗೆ ಸರಿಸಿ ಮುಂದೆ ಹೋಗುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.ಆದರೆ ಇಲ್ಲೊಬ್ಬ ವೃದ್ಧರಿದ್ದಾರೆ,ರಸ್ತೆಯಲ್ಲಿ ಗುಂಡಿಯನ್ನು ಕಂಡರೂ ಸರಕಾರದ ಅನುದಾನಕ್ಕೆ ಕಾಯದೇ ಯಾವುದೇ ಅಪೇಕ್ಷೆ ಇಲ್ಲದೆ ರಸ್ತೆ ಗುಂಡಿಗಳನ್ನ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು ರಸ್ತೆಯಲ್ಲಿ ಗುಂಡಿಗಳನ್ನು ಕಂಡ್ರೆ ಸಾಕು, ಅದನ್ನು ಕೂಡಲೇ ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಈ ವೃದ್ಧ ಕಾರವಾರದವರೆಂದು (Karwar) ತಿಳಿದು ಬಂದಿದೆ.ಸದ್ಯ ಇವರ ಶ್ಲಾಘನಾರ್ಹ ಕೆಲಸದ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಅಂದಹಾಗೆ ಇವರ ಹೆಸರು ಜಾನ್ ಅಂತ .ಬೆಳಗ್ಗೆ ಎದ್ದ ಕೂಡಲೇ ಬುಟ್ಟಿ,ಗುದ್ದಲಿಗಳ ಮೂಲಕ ತಮ್ಮ ಸೈಕಲ್ ಏರಿ ಒಂದು ರೌಂಡ್ ಹೋಡಿಯೋ ಇವರು ಆ ಸೈಕಲ್‌ನ್ನು ಬದಿಗಿಟ್ಟು ಗುಂಡಿ ಬಿದ್ದಿರುವ ರಸ್ತೆಯತ್ತ ಹೆಜ್ಜೆಯಿಡುತ್ತಾರೆ. ಗುಂಡಿಗಳನ್ನ ಮುಚ್ಚುವ ಕಾರ್ಯಕ್ಕೆ ಮುಂದಾಗುತ್ತಾರೆ.
ಇದೀಗ ಇಷ್ಟು ದಿನ ಮಾಡಿದ ಸಮಾಜ ಸೇವೆ ಯಾರಿಗೂ ತಿಳಿದಿರಲಿಲ್ಲ.ಆದರೆ ಈಗ ಈ ನಿಸ್ವಾರ್ಥ ಸಮಾಜ ಸೇವೆಯ ಫೋಟೋ ಎಲ್ಲೆಡೆ ವೈರಲ್ ಆಗಿದೆ.ಏನೇ ಸಮಸ್ಯೆಗಳಾದ್ರೂ ಮತ್ತೊಬ್ಬರನ್ನು ಕಾಯದೇ , ಯಾವುದೇ ಸ್ವಾರ್ಥವಿಲ್ಲದೇ, ನಿಸ್ವಾರ್ಥವಾಗಿ ವಾಹನ ಸವಾರರಿಗಾಗಿ ಅನುಕೂಲ ಮಾಡಿಕೊಡುತ್ತಿರುವ ಈ ವೃದ್ಧನಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿವೆ.