ಕ್ರೈಂರಾಜ್ಯವೈರಲ್ ನ್ಯೂಸ್

ಉತ್ತರ ಕನ್ನಡದ ಘಟ್ಟ ಪ್ರದೇಶಗಳಲ್ಲಿ ಭೂಕಂಪನ..! ಶಿರಸಿ ಮತ್ತು ಕುಮಟಾ ಭಾಗಗಳಲ್ಲಿ ನಡುಗಿದ ಭೂಮಿ..!

ನ್ಯೂಸ್ ನಾಟೌಟ್: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕುಮಟಾ ಭಾಗದ ಘಟ್ಟ ಪ್ರದೇಶದಲ್ಲಿ ಮೂರು ಸೆಕೆಂಡ್‌ ಗೂ ಹೆಚ್ಚಿನ ಸಮಯ ಭೂಕಂಪನದ ಅನುಭವವಾಗಿದೆ. ಇದರಿಂದ ಆ ಪ್ರದೇಶದ ಜನ ಭಯಭೀತರಾಗಿದ್ದರು.

ಕುಮಟಾ ತಾಲೂಕಿನ ದೇವಿಮನೆ ಘಟ್ಟ ಮತ್ತು ಶಿರಸಿ ತಾಲೂಕಿನ ಗ್ರಾಮವಾದ ರಾಗಿ ಹೊಸಳ್ಳಿ, ಕಸಗೆ, ಬಂಡಳ ಭಾಗದಲ್ಲಿ ಭೂಮಿ ಕಂಪಿಸಿದೆ. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ನಡೆಯುತ್ತಿದೆ. ಗುಡ್ಡ ಕೊರೆದು ರಸ್ತೆ ಮಾಡಲಾಗುತಿದ್ದು ಕಲ್ಲುಗಳನ್ನು ಸಿಡಿಸಿರಬಹುದು ಇದರಿಂದ ಕಂಪನ ಉಂಟಾಗಿದೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು. ಆದರೆ, ಇದು ನೈಸರ್ಗಿಕ ಭೂಕಂಪನ ಎಂದು ದೃಢಪಟ್ಟಿದೆ.

ಇದೇ ಸಮಯದಲ್ಲಿ ಹಿಂದೂ ಮಹಾಸಾಗರದಲ್ಲಿ 10 ಕಿ.ಮೀ ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂಕಂಪನವಾಗಿದೆ. ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.

Click

https://newsnotout.com/2024/12/fbi-director-indian-origin-kashyap-viral-news-donald-trump/
https://newsnotout.com/2024/12/gold-mining-in-china-worlds-largest-news-issue/
https://newsnotout.com/2024/12/tamilnadu-cyclone-kannada-news-3-nomore-video/
https://newsnotout.com/2024/12/kaalabhairav-kannada-news-viral-cigarate-police-investigation/
https://newsnotout.com/2024/12/cm-siddaramayya-kannada-news-1-lakh-rupees-fj/
https://newsnotout.com/2024/12/cyclone-issue-at-chennai-kannada-news-viral-video-air-india-landing/

Related posts

ಗೋಳಿತೊಟ್ಟು: ನೈಲನ್ ಹಗ್ಗದಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಯುವಕ, ತಂದೆಯ ಸಾವಿಗೆ ಮನನೊಂದು ಕೃತ್ಯ ಎಸಗಿದನೇ..?

ಭಾರತ ಸರ್ಕಾರ ಹೀಗೆ ಮಾಡಿದರೆ ನಾವು ಭಾರತದಲ್ಲಿ ಸೇವೆ ನಿಲ್ಲಿಸುತ್ತೇವೆ ಎಂದದ್ದೇಕೆ ವಾಟ್ಸಾಪ್..? ಕೇಂದ್ರ ಸರ್ಕಾರ ನಡೆಸುತ್ತಿರುವ ಕಾನೂನು ಸಮರವೇನು..?

ಕಳ್ಳತನ ಮಾಡಿದ್ದಾಳೆಂದು ಸಮವಸ್ತ್ರ ಬಿಚ್ಚಿಸಿ ಪರಿಶೀಲಿಸಿದ ಶಿಕ್ಷಕಿ..! 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ..!