ಕರಾವಳಿವೈರಲ್ ನ್ಯೂಸ್

ಉಡುಪಿ ಕೃಷ್ಣ ಮಠಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಅಚ್ಚರಿ ಮೂಡಿಸಿದ ಸ್ಪೀಕರ್ ಖಾದರ್! ಕೃಷ್ಣ ಹುಟ್ಟಿದ ಸಮಯಕ್ಕೆ ಖಾದರ್ ಭೇಟಿ ನೀಡಿದ್ದೇಕೆ?

273

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಕೋಮು ಸಂಘರ್ಷಕ್ಕಿಂತ ಕೋಮು ಸೌಹಾರ್ಧತೆಗೂ ಸುದ್ದಿಯಾಗುತ್ತಿರುತ್ತದೆ. ಕೃಷ್ಣಜನ್ಮಾಷ್ಟಮಿಯ ಮೊದಲ ದಿನವಾದ ನಿನ್ನೆ(ಸೆ.6) ಎಲ್ಲೆಲ್ಲೂ ಕೃಷ್ಣಾಷ್ಟಮಿಯ ಸಂಭ್ರಮ, ಸಡಗರ ಮನೆಮಾಡಿತ್ತು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಈ ಸಂದರ್ಭ ನಡೆಯುತ್ತಿವೆ. ಶ್ರೀಕೃಷ್ಣ ಮಥುರಾದಲ್ಲಿ ಮಧ್ಯರಾತ್ರಿ ಜನಿಸಿದ್ದು ನಮಗೆಲ್ಲಾ ತಿಳಿದಿದೆ. ಅದೇ ಮಧ್ಯರಾತ್ರಿಯ ಸಮಯದಲ್ಲಿ ಉಡುಪಿಯ ಶ್ರೀಕೃಷ್ಣಮಠಕ್ಕೆ ಸ್ಪೀಕರ್ ಖಾದರ್ ಭೇಟಿ ನೀಡಿ ಕೃಷ್ಣಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದರು.

ಮಠದ ಸತ್ಯನಾರಾಯಣ ಭಟ್ ಸ್ಪೀಕರ್ ರನ್ನು ಬರಮಾಡಿಕೊಂಡರು. ಮಠದೊಳಗೆ ಭೇಟಿ ನೀಡಿದ ಯು.ಟಿ.ಖಾದರ್ ರನ್ನು ಸತ್ಯನಾರಾಯಣ ಭಟ್ ಮತ್ತು ಸಮಿತಿಯವರು ಶಾಲು ಹೊದಿಸಿ ಸ್ವಾಗತಿಸಿ, ದೇವರ ಪ್ರಸಾದವನ್ನು ಪಡೆದರು.

ಸ್ಪೀಕರ್ ಅವರೊಂದಿಗೆ ಭಾಸ್ಕರ ರಾವ್ ಕಿದಿಯೂರ್, ರಮೇಶ್ ಕಾಂಚನ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಮುಸ್ತಫಾ ಹರೇಕಳ, ಬದ್ರುದ್ದೀನ್ ಜೊತೆಗಿದ್ದರು.

See also  ಸಂಪಾಜೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ,ಶಾಸಕಿ ಭಾಗೀರಥಿ ಮುರುಳ್ಯ ಶ್ಲಾಘನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget