ನ್ಯೂಸ್ ನಾಟೌಟ್: ನಿನ್ನೆ (ಮೇ.7) ರಾತ್ರಿ ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನ ತಕ್ಕ ಶಾಸ್ತಿ ಮಾಡಿಸಿಕೊಂಡಿದೆ. ಭಾರತದ ಕ್ಷಿಪಣಿಗಳ ದಾಳಿಗೆ ಲಾಹೋರ್ ನ ರೆಡಾರ್ ಕೇಂದ್ರವೇ ಧ್ವಂಸವಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಪಾಕ್‌ನಲ್ಲಿರುವ ಯುಎಸ್ ಪ್ರಜೆಗಳು ಕೂಡಲೇ ದೇಶ ತೊರೆಯುವಂತೆ ಹೇಳಿದೆ.
ಭಾರತೀಯ ನಗರಗಳನ್ನ ಟಾರ್ಗೆಟ್ ಮಾಡಿದ್ದ ಪಾಕ್ ಗೆ ದಿಟ್ಟ ಉತ್ತರ ನೀಡಿದ ಭಾರತೀಯ ವಾಯುಸೇನೆ, ಲಾಹೋರ್ ನಲ್ಲಿರುವ ರೆಡಾರ್ ಕೇಂದ್ರವನ್ನೇ ಧ್ವಂಸ ಮಾಡಿದೆ. ಶೇಖ್ ಪುರ, ಸಿಯಾಲ್ ಕೋಟ್, ಗುಜರನ್ ವಾಲಾ ಮತ್ತು ನರೊವಾಲಾ ಮತ್ತ ಚಕ್ವಾಲ್ ಮೇಲೂ ಭಾರತದ ಕಾಮಕಾಜಿ ಡ್ರೋನ್ ದಾಳಿ ನಡೆಸಿದೆ. ಒಟ್ಟು 25 ಕ್ಷಿಪಣಿಗಳನ್ನು ಭಾರತ ಹಾರಿಸಿದೆ ಇದರಲ್ಲಿ 7 ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯನ್ನು ಗುರಿಯಾಗಿಸಿವೆ.
ಲಾಹೋರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿದ ಬೆನ್ನಲ್ಲೇ ಎಚ್ಚೆತ್ತ ಅಮೆರಿಕ ರಾಯಭಾರ ಕಚೇರಿ ತನ್ನೆಲ್ಲಾ ಸಿಬ್ಬಂದಿಗೆ ಆಶ್ರಯ ನೀಡುವಂತೆ ಕೇಳಿದೆ. ಅಲ್ಲದೇ ಸಂಘರ್ಷ ಪೀಡಿತ ಪ್ರದೇಶಗಳಲ್ಲಿರುವ ಅಮೆರಿಕದ ನಾಗರಿಕರು ಕೂಡಲೇ ದೇಶ ತೊರೆಯುವಂತೆ ಸೂಚನೆ ನೀಡಿದೆ. ಎಲ್ಲ ಯುಎಸ್ ನಾಗರಿಕರು ಸಾಧ್ಯವಾದರೆ ಈ ಕೂಡಲೇ ಹೊರಡಿ ಅಥವಾ ಪಾಕ್ ನ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದುಕೊಳ್ಳಿ ಎಂದು ಎಚ್ಚರಿಸಿದೆ.
ಪಾಕಿಸ್ತಾನದ ಮೇಲೆ ಮತ್ತೆ ಭಾರತ ದಾಳಿ..! ಲಾಹೋರ್ ನಲ್ಲಿದ್ದ ಪಾಕ್ ನ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ..!