ಕ್ರೈಂವಿಡಿಯೋವೈರಲ್ ನ್ಯೂಸ್ಸಿನಿಮಾ

ಬಾತ್ ರೂಮ್ ವಿಡಿಯೋ ಲೀಕ್ ಆಗಿದ್ದು ನಿಜ ಎಂದು ಒಪ್ಪಿಕೊಂಡ ಊರ್ವಶಿ..! ಈ ಬಗ್ಗೆ ಬಾಲಿವುಡ್ ಬೆಡಗಿ ಹೇಳಿದ್ದೇನು..?

193

ನ್ಯೂಸ್ ನಾಟೌಟ್: ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಸ್ನಾನದ ವಿಡಿಯೋ ಲೀಕ್ ಆಗಿತ್ತು. ಅವರು ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ನಟಿ ಊರ್ವಶಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ನಟಿ ಮಾತನಾಡಿ, ಕ್ಲಿಪ್ ಸೋರಿಕೆಯಾದ ದಿನ, ನಾನು ಅಸಮಾಧಾನಗೊಂಡಿದ್ದೆ. ಖಂಡಿತವಾಗಿಯೂ ಇದು ನನ್ನ ವೈಯಕ್ತಿಕ ಕ್ಲಿಪ್ ಅಲ್ಲ, ಇದು ‘ಘುಸ್ಪೈತಿಯೇ’ ಚಲನಚಿತ್ರದ ಭಾಗವಾಗಿದೆ ಎಂದಿದ್ದಾರೆ. ಯಾವ ಹುಡುಗಿಗೂ ಈ ರೀತಿ ಆಗಬಾರದು ಎಂದು ನಟಿ ಮಾತನಾಡಿದ್ದಾರೆ.

ನಟಿಯ ಸ್ನಾನದ ವಿಡಿಯೋ ವೈರಲ್ ಆದಾಗ ಇದನ್ನು ಪಿಆರ್ ಸ್ಟಂಟ್ ಎಂದು ಹೇಳುತ್ತಿದ್ದರು. ಊರ್ವಶಿ ವಿಡಿಯೋದಲ್ಲಿ ಮಂಗಳಸೂತ್ರ ಕೂಡ ಧರಿಸಿದ್ದರು. ಹೀಗಾಗಿ ಇದು ಫೇಕ್ ಎಂದು ಹೇಳಲಾಗಿತ್ತು. ‘ಘುಸ್ಪೈತಿಯೇ’ ಸಿನಿಮಾದಲ್ಲಿ ಊರ್ವಶಿ ನಾಯಕಿಯಾಗಿ ನಟಿಸಿದ್ದಾರೆ. ಆಗಸ್ಟ್ 9ರಂದು ಬಿಡುಗಡೆಯಾಗಲಿದೆ. ಅಕ್ಷಯ್ ಒಬೆರಾಯ್ ಅವರೊಂದಿಗೆ ಊರ್ವಶಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ.

Click

https://newsnotout.com/2024/07/darshan-food-and-health-issue-kannada-news-highcourt-e/
https://newsnotout.com/2024/07/dakshina-kannada-news-moodabidire-family-incident-viral-news/
See also  ಬಿ.ಸಿ ರೋಡ್‌: ಮುಸ್ಲಿಂ ಯುವಕರಿಂದ ಬೈಕ್‌ ರ‍್ಯಾಲಿ..! ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಳ್ಳಾಟ-ನೂಕಾಟ..! ಹಸಿರು ಧ್ವಜ ಹಾಗೂ ಬೈಕ್‌ಗಳು ವಶಕ್ಕೆ ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget