Latestಕರಾವಳಿಕೇರಳವಿಡಿಯೋವೈರಲ್ ನ್ಯೂಸ್

‘ಉಪ್ಪಿ­ಟ್ಟುಬೇಡ, ಬಿರಿಯಾನಿ ಬೇಕು’ ಎಂದ ಮಗುವಿನ ವಿಡಿಯೋ ವೈರಲ್ ಆದ ಬಳಿಕ ಸರ್ಕಾರದ ಮಹತ್ವದ ನಿರ್ಧಾರ..! ಕೇರಳ ಅಂಗನವಾಡಿ ಮೆನುಗೆ ಮೊಟ್ಟೆ ಬಿರಿಯಾನಿ ಸೇರ್ಪಡೆ..!

1.3k

ನ್ಯೂಸ್‌ ನಾಟೌಟ್‌: ಅಂಗನವಾಡಿ ಕೇಂದ್ರಗಳ ಊಟದ ಮೆನುವಿನಲ್ಲಿ ಮೊಟ್ಟೆ ಬಿರಿಯಾನಿ ಸೇರಿಸಲು ಕೇರಳ ಸರ್ಕಾರ ನಿರ್ಧರಿಸಿದೆ.

“ಉಪ್ಪಿ­ಟ್ಟುಬೇಡ, ಮೊಟ್ಟೆ ಬಿರಿಯಾನಿ ಬೇಕು’ ಎಂದು ಮಗು­ವೊಂದು ತಾಯಿಗೆ ಕೇಳಿದ ವೀಡಿಯೋ ಈ ಹಿಂದೆ ವೈರಲ್‌ ಆದ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಂಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.

ಪ್ರಸ್ತುತ ಕೇರಳದ ಅಂಗನವಾಡಿಗಳಲ್ಲಿ ವಾರಕ್ಕೆ 2 ದಿನ ಮೊಟ್ಟೆ ನೀಡಲಾಗುತ್ತಿದೆ. ಒಂದು ತಿಂಗಳ ಹಿಂದೆ ಇದಕ್ಕೆ ನಿರ್ಧಾರ ಮಾಡಲಾಗಿತ್ತು, ಈಗ ಆದೇಶ ಮಾಡಲಾಗಿದೆ. ಇನ್ನು ಮುಂದೆ ಮೊಟ್ಟೆ ಬಿರಿಯಾನಿ ಯಾವ ದಿನಗಳಲ್ಲಿ ನೀಡಬೇಕು, ಅದರ ವ್ಯವಸ್ಥೆಗಳೇನು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ದೊರೆಯಬೇಕಿದೆ.

See also  ಸ್ವಂತ ದುಬಾರಿ ಕಾರಿಗೆ ಸರ್ಕಾರಿ ಸೈರನ್, ಫಲಕ ಹಾಕಿಸಿಕೊಂಡು ತಿರುಗಾಟ..! IAS ಅಧಿಕಾರಿ ಪೂಜಾ ವರ್ಗಾವಣೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget