ಕ್ರೈಂ

ಉಪ್ಪಿನಂಗಡಿ: ಊಟ ಮಾಡುತ್ತಿದ್ದ ಮಹಿಳೆ ಮೇಲೆ ಕೈ ಹಾಕಿದ ದುಷ್ಕರ್ಮಿ

730

ಉಪ್ಪಿನಂಗಡಿ: ಇಲ್ಲಿನ ಹೋಟೆಲ್‌ವೊಂದರಲ್ಲಿ ಊಟ ಮಾಡುತ್ತಿದ್ದ ಮಹಿಳೆಯ ಮೈ ಮೇಲೆ ದುಷ್ಕರ್ಮಿಯೊಬ್ಬ ಕೈ ಹಾಕಿ ಚುಡಾಯಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ದುಷ್ಕೃತ್ಯ ನಡೆಸಿದ ಆರೋಪಿಯನ್ನು ವೇಣೂರು ನಿವಾಸಿ ಪ್ರಶಾಂತ್ ಎಂದು ಗುರುತಿಸಲಾಗಿದೆ.

ಹೋಟೆಲ್ ನಲ್ಲಿ ಮಧ್ಯಾಹ್ನ ಬಂದ ವ್ಯಕ್ತಿ ಊಟಕ್ಕೆ ಆರ್ಡರ್ ಕೊಟ್ಟು ಆಚೆ ಇಚೆ ನೋಡುತ್ತಾ ಕುಳಿತಿದ್ದಾನೆ, ಸುಮ್ಮನಿರಲಾಗದೆ ಪಕ್ಕದಲ್ಲಿ ಕುಳಿತಿದ್ದ ಮಹಿಳಾ ಗ್ರಾಹಕಿಯ ಮೈ ಮುಟ್ಟಿ ಚುಡಾಯಿಸಿದ ಎನ್ನಲಾಗಿದೆ. ತಕ್ಷಣ ಆ ಮಹಿಳೆ ಹೋಟೆಲ್ ಮಾಲೀಕರಿಗೆ ದೂರು ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಆತ ಸೋಡಾ ಬಾಟಲಿಗಳಿಂದ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ, ಈ ವೇಳೆ ನಡೆದ ಘರ್ಷಣೆಯಲ್ಲಿ ನೆಲಕ್ಕೆ ಬಿದ್ದು ಆತನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

See also  ಯೂಟ್ಯೂಬ್‌ ನೋಡಿ ಹೊಟ್ಟೆ ಆಪರೇಷನ್‌ ಮಾಡಿಕೊಂಡ ವ್ಯಕ್ತಿ ಬದುಕಿದ್ದೇ ಪವಾಡ..! ಆತನ ಕಿರುಚಾಟ ಕೇಳಿ ಓಡಿ ಬಂದ ಜನ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget