ಕ್ರೈಂ

ಉಪ್ಪಿನಂಗಡಿ: ಪುಂಡ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು

ನ್ಯೂಸ್ ನಾಟೌಟ್: ಉಪ್ಪಿನಂಗಡಿಯಲ್ಲಿ ಕೆಲ ವಿದ್ಯಾರ್ಥಿಗಳ ಪುಂಡಾಟ ಮಿತಿ ಮೀರಿದಂತಿದೆ. ಹಿಜಾಬ್ ಗುಂಗಿನಲ್ಲಿ ಮೈಮರೆತಿರುವ ಅವರು ವರದಿಗಾರಿಕೆಗಾಗಿ ತೆರಳಿದ ಪತ್ರಕರ್ತರ ಮೇಲೆಯೇ ಹಲ್ಲೆ ಮಾಡಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೀಗ ಈ ಕುರಿತಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಉಂಟಾದ ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಮಂಗಳೂರು ತಾಲೂಕು ಕೋಟೆಕಾರು ಸಮೀಪದ ಮಾಡೂರು ನಿವಾಸಿ ಅಜಿತ್ ಕುಮಾರ್ ಕೆ (44) ವರದಿಗೆ ತೆರಳಿದ್ದರು. ಈ ವೇಳೆ ಅವರಿಗೆ ವಿದ್ಯಾರ್ಥಿಗಳ ಗುಂಪು ಸುತ್ತುವರಿದು ತಳ್ಳಾಟ ನಡೆಸಿದೆ.

ಗುರುವಾರ ಪೂರ್ವಾಹ್ನ ಸುಮಾರು 11.40 ರ ವೇಳೆ ಗೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಹಿನ್ನಲೆಯಲ್ಲಿ ಸಂಘರ್ಷ ಉಂಟಾಗಿದ್ದರಿಂದ ಪ್ರಾಂಶುಪಾಲರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡು ಹಿಂತಿರುಗುವ ಸಂದರ್ಭ ಸುಮಾರು 25 ಮಂದಿ ವಿದ್ಯಾರ್ಥಿಗಳ ಗುಂಪು ಸುತ್ತುವರಿದು ತಳ್ಳಾಟ ನಡೆಸಿದ್ದಾರೆ. ಈ ವೇಳೆ ಹಲ್ಲೆ ಮಾಡಿದ್ದಾರೆ. ಕ್ಯಾಂಪಸ್ಸಿನಲ್ಲಿ ದಿಗ್ಬಂಧನ ವಿಧಿಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2022 ಕಲಂ ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Related posts

ಭೀಕರ ಕಾರು ಅಪಘಾತ… ಪ್ರವಾಸಕ್ಕೆಂದು ತೆರಳಿದ್ದ ಬಿಜೆಪಿ ಮುಖಂಡ ದಾರುಣ ಸಾವು!

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಇಂದಿಗೆ(ಜು.26) 2 ವರ್ಷ..! ಪ್ರಮುಖ ಆರೋಪಿಗಳು ಇನ್ನೂ ನಿಗೂಢ..!

ಕೊಳೆತ ಸ್ಥಿತಿಯಲ್ಲಿ ಹುಲಿ‌ ಶವ ಪತ್ತೆ..! ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತ ಹಲವು ಅನುಮಾನ..!