ಕರಾವಳಿಕ್ರೈಂಪುತ್ತೂರುವೈರಲ್ ನ್ಯೂಸ್

ಉಪ್ಪಿನಂಗಡಿ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಲಗಿದಲ್ಲೇ ದಿಢೀರ್ ಸಾವು! ಹೃದಯಾಘಾತ ಶಂಕೆ!

ನ್ಯೂಸ್‌ ನಾಟೌಟ್‌ : ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಲಗಿದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ವರದಿಯಾಗಿದೆ.

ಹಫೀಜಾ (17) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದ್ದು, ಈಕೆ ಉಪ್ಪಿನಂಗಡಿಯ ನೆಕ್ಕಿಲಾಡಿ ಕುರ್ವೇಲು ನಿವಾಸಿಯಾದ ಉದ್ಯಮಿ ದಾವೂದ್ ಎಂಬವರ ಪುತ್ರಿ ಎನ್ನಲಾಗಿದೆ.

ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಹಫೀಜಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಹಫೀಜಾ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರಣ ತಡ ರಾತ್ರಿವರೆಗೂ ಅಭ್ಯಾಸ ಮಾಡುತ್ತಿದ್ದಳು.

ಎಂದಿನಂತೆ ಗುರುವಾರ(ಫೆ.೧೫) ಕೂಡ ತಡ ರಾತ್ರಿವರೆಗೂ ಓದಿಕೊಂಡು ಮಲಗಿದ್ದಾಳೆ. ಆದರೆ ಮುಂಜಾನೆ ಮಲಗಿದ್ದಲ್ಲಿಂದ ಎದ್ದೇಳಲೇ ಇಲ್ಲ, ಇದನ್ನ ಮನೆಯವರು ಗಮನಿಸಿದ್ದಾರೆ. ಬಳಿಕ ಮಲಗಿದಲ್ಲಿಯೇ ಹಫೀಜಾ ಮೃತಪಟ್ಟಿರುವುದು ತಿಳಿದುಬಂದಿದೆ.

Related posts

ಬಂಧನ ಭೀತಿಯಿಂದ ಕಾಡು ಸೇರಿದ ಗ್ರಾಮಸ್ಥರು..! ಅಧಿಕಾರಿಗಳು ಜನರನ್ನು ಮತ್ತೆ ಕರೆತಂದದ್ದೇಗೆ..? ಏನಿದು ಪ್ರಕರಣ..?

ಸುಳ್ಯ:ಪಿಲಿಕಜೆಯಲ್ಲಿ NMCಯ ಎನ್.ಎಸ್.ಎಸ್. ವಿಶೇಷ ಶಿಬಿರ ಸಮಾರೋಪ ಸಮಾರಂಭ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆಯನ್ನು ಎನ್.ಎಸ್.ಎಸ್‌. ಕಲಿಸುತ್ತದೆ – ಡಾ. ಕೆ.ವಿ. ಚಿದಾನಂದ

ಗುಂಡುಸೂಜಿ ನುಂಗಿದ್ದೇಗೆ ಬಾಲಕ..? ಏನಿದು ಅಪರೂಪದ ಶಸ್ತ್ರಚಿಕಿತ್ಸೆ..?