ಕರಾವಳಿಕ್ರೈಂ

ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ತೆರಳುತ್ತಿದ್ದ ವೇಳೆ 10 ಲಕ್ಷ ರೂ ದರೋಡೆ ಪ್ರಕರಣ, ಆರೋಪಿ ಪೊಲೀಸ್ ಬಲೆಗೆ

404

ನ್ಯೂಸ್ ನಾಟೌಟ್: ಮಗಳ ಮದುವೆಗೆ ಚಿನ್ನ ಖರೀದಿಸಲು ಬಂದಾಗ ಅಪರಿಚಿತ ವ್ಯಕ್ತಿ ಹತ್ತು ಲಕ್ಷ ನಗದು ಹಣ ದೋಚಿ ಪರಾರಿಯಾಗಿರುವ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಒಂಬತ್ತು ಲಕ್ಷ ರೂ. ನಗದಿನೊಂದಿಗೆ ವಶಪಡಿಸಿಕೊಂಡಿದ್ದಾರೆ.

ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ಮಹಮ್ಮದ್ ಕೆ. ಎಂಬವರು ತನ್ನ ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸ್ಕೂಟರ್‌ನಲ್ಲಿ 10,00,000 ರೂಪಾಯಿ ನಗದು ಹಣದೊಂದಿಗೆ ತೆರಳಿದ್ದ ಘಟನೆ ವರದಿಯಾಗಿತ್ತು.

ಉಪ್ಪಿನಂಗಡಿ ಜ್ಯುವೆಲ್ಲರಿಗೆ ಹೋಗುತ್ತಿರುವಾಗ ದಾರಿಯ ಮಧ್ಯೆ ಅಪರಿಚಿತ ವ್ಯಕ್ತಿಯೋರ್ವ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋಗಿದ್ದ , ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಇಳಂಕಿಲ ಗ್ರಾಮದ ಕಡವಿನ ಬಾಗಿಲು ಮನೆ ನಿವಾಸಿ ಅಬ್ದುಲ್ ಖಾದ್ರಿ ಅವರ ಮಗನಾದ ಮುಸ್ತಫ(41)ನನ್ನು ಬಂಧಿಸಿದ್ದಾರೆ.

ಜೊತೆಗೆ ಒಂಬತ್ತು ಲಕ್ಷ ರೂ. ನಗದು ಹಣವನ್ನು ವಶಪಡೆಸಿಕೊಂಡಿದ್ದಾರೆ. ಇನ್ನೋರ್ವ ಆರೋಪಿ ಒಂದು ಲಕ್ಷ ರೂ. ನೊಂದಿಗೆ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

See also  ಮಡಿಕೇರಿ: ನಾಪತ್ತೆಯಾಗಿದ್ದ ಬಾಲಕಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆ..!,ಆಗಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget