ಕರಾವಳಿಕ್ರೈಂ

ಉಪ್ಪಿನಂಗಡಿ: ಪಿಕಪ್ ನಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ..! ಹಸು, ಹೋರಿ ಹಾಗೂ ಕರು ಪೊಲೀಸರ ವಶಕ್ಕೆ

247

ನ್ಯೂಸ್ ನಾಟೌಟ್: ಬೆಳ್ತಂಗಡಿ ತಾಲೂಕಿನ ಪದ್ಮುಂಜ ಎಂಬಲ್ಲಿ ಪಿಕಪ್ ವಾಹನವೊಂದರಲ್ಲಿ ಕಸಾಯಿಖಾನೆಗೆ ಸಾಗಿಸಲ್ಪಡುತ್ತಿದ್ದ ಜಾನುವಾರುಗಳನ್ನು ಉಪ್ಪಿನಂಗಡಿ ಪೊಲೀಸರು ಪತ್ತೆಹಚ್ಚಿ ಪ್ರಕರಣ ಮೇ.12 ರಾತ್ರಿ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋತ್ತಡ್ಕ ನಿವಾಸಿ ರಕ್ಷಿತ್ (25) ಜಾನುವಾರು ಸಾಗಾಟದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಪದ್ಮುಂಜ ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದಾಗ ಅದರಲ್ಲಿ ಮೂರು ಜಾನುವಾರುಗಳ ಕಾಲುಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು. ಪೊಲೀಸರು ಈ ಬಗ್ಗೆ ಪಿಕಪ್ ಚಾಲಕ ರಕ್ಷಿತ್‍ ನನ್ನು ವಿಚಾರಿಸಿದಾಗ ಈ ಜಾನುವಾರುಗಳನ್ನು ಪದ್ಮುಂಜದಿಂದ ಖರೀದಿ ಮಾಡಿ, ಕಡಿದು ಮಾಂಸ ಮಾಡಲು ಕಸಾಯಿಖಾನೆಗೆ ಸಾಗಾಟ ಮಾಡುವುದಾಗಿ ರಕ್ಷಿತ್‍ ತಿಳಿಸಿದ್ದಾನೆ ಎನ್ನಲಾಗಿದೆ. ಪಿಕಪ್‌ ನಲ್ಲಿದ್ದ ಹಸು, ಹೋರಿ ಹಾಗೂ ಕರುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಪ್ರಕರಣ ದಾಖಲಾಗಿದೆ.

Click 👇

https://newsnotout.com/2024/05/voting-and-viral-video
https://newsnotout.com/2024/05/petrol-price-60-years-ago
See also  ಮದ್ಯದ ದರ ಏರಿಕೆಯಾಗಿದ್ದರೂ 'ಎಣ್ಣೆ' ಕುಡಿಯೋರ ಸಂಖ್ಯೆ ಇಳಿದಿಲ್ಲವಂತೆ..! ಅಬಕಾರಿ ವರಮಾನ ಹೆಚ್ಚಾಗಿದ್ದೆಷ್ಟು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget