ನ್ಯೂಸ್ ನಾಟೌಟ್ : ಮನೆಯಿಂದ ಹೊರಟ ಹಿರಿಯಜ್ಜವೊಬ್ಬರು ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
88 ವರ್ಷದ ಬಟ್ಯಪ್ಪ ಕುಲಾಲ್ ಜು.25ರಂದು ಸುಮಾರು 11 ಗಂಟೆಯ ನಂತರ ಕಾಣೆಯಾಗಿದ್ದಾರೆ. ಇವರು ಬಿಳಿ ಬಣ್ಣದ ಅಂಗಿ, ಬಿಳಿ ಬಣ್ಣದ ಪಂಚೆ ಹಾಗೂ ಕೆಂಪು ಬಣ್ಣದ ಶಾಲು ಧರಿಸಿದ್ದಾರೆ. ತುಳು ಭಾಷೆಯನ್ನು ಬಲ್ಲವರಾಗಿದ್ದು ಮೂಲತಃ ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದವರಾಗಿದ್ದಾರೆ. ಉಪ್ಪಿನಂಗಡಿಯಿಂದ ಬಸ್ ಇಳಿದು ಹೋಗುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ. ಇವರು ಎಲ್ಲಾದರೂ ಕಂಡು ಬಂದರೆ 9964038573 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.