ಉಪ್ಪಿನಂಗಡಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಅಶ್ಲೀಲ ಚಿತ್ರ ಜೋಡಣೆ ಮಾಡಿದ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ. ಆರೋಪಿಯನ್ನು ವಿಘ್ನೇಶ್ ಬಿಳಿಯೂರು ಎಂದು ಗುರುತಿಸಲಾಗಿದ್ದು ಆತ ಸಾಮಾಜಿಕ ಜಾಲತಾಣ ವಾಟ್ಸ್ ಅಪ್ ಪೋಸ್ಟ್‌ನಲ್ಲಿ ಗಾಂಧೀಜಿಗೆ ಅಸಭ್ಯ ಪದಗಳನ್ನೂ ಬಳಸಿ ಕೆಟ್ಟದಾಗಿ ಬಿಂಬಿಸಿದ್ದಾನೆ ಎಂದು ಹೇಳಲಾಗಿದೆ. ಈತನನ್ನು ಕೂಡಲೇ ಬಂಧಿಸಬೇಕು ಎಂದು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಆಗ್ರಹಿಸಿದ್ದಾರೆ. ಗಾಂಧೀಜಿ ದೇಶಕ್ಕೆ ಎಷ್ಟು ದೊಡ್ಡ ವ್ಯಕ್ತಿ ಅನ್ನುವುದು ಎಲ್ಲರಿಗೂ ಗೊತ್ತಿದೆ. ಅಂತಹವರ ಹೆಸರಿಗೆ ಮಸಿ ಬಳೆಯುತ್ತಿರುವ ಆರೋಪಿಯನ್ನು ಪೊಲೀಸರು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
previous post