ಉಪ್ಪಿನಂಗಡಿಕರಾವಳಿಕ್ರೈಂ

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ನುಗ್ಗಿದ ಆಂಬ್ಯುಲೆನ್ಸ್..! ರಸ್ತೆ ಬದಿಯಲ್ಲಿ ನಿಂತಿದ್ದ ಶಾಲಾ ಮಕ್ಕಳು ಅಪಾಯದಿಂದ ಪಾರು..!

ನ್ಯೂಸ್ ನಾಟೌಟ್: ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ಒಂದು ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ಡಿ. 9ರಂದು ಬೆಳಗ್ಗೆ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ನಡೆದಿದೆ.

ಪುತ್ತೂರಿನಿಂದ ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ಆಂಬ್ಯುಲೆನ್ಸ್ ವನಸುಮ ನರ್ಸರಿ ರಸ್ತೆಯಲ್ಲಿ ನೇರ ಸಾಗಿ ಮನೆಯೊಂದರ ವರಾಂಡಕ್ಕೆ ನುಗ್ಗಿದೆ. ಘಟನೆಯಿಂದ ಮನೆಯ ಆವರಣಗೋಡೆಗೆ ಹಾನಿಯಾಗಿದ್ದು, ರಸ್ತೆ ಬದಿ ಶಾಲಾ ಮಕ್ಕಳು ನಿಂತಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಕನ್ಯಾಡಿಯ ಸೇವಾ ಭಾರತಿಗೆ ಸೇರಿದ ಆಂಬ್ಯುಲೆನ್ಸ್ ಇದಾಗಿದ್ದು, ಆರೋಗ್ಯ ಶಿಬಿರವೊಂದಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.

Related posts

ಮತ್ತೆ ಮಲ್ಪೆ ಬೀಚ್ ನ  ಆಕರ್ಷಣೆ ಹೆಚ್ಚಿಸಿದ ರಾಜ್ಯದ ಮೊದಲ ‘ತೇಲುವ ಸೇತುವೆ’,ಅಲೆಗಳ ಮೇಲೆ ಆಟವಾಡಲು ತೇಲುವ ಸೇತುವೆ ರೆಡಿ

2 ವರ್ಷದ ಅಕ್ಕ ಚಾಕಲೇಟ್ ಕೊಟ್ಟಳೆಂದು ಪ್ಯಾಂಟ್ ಬಟನ್‌ನ್ನು ನುಂಗಿದ 2 ತಿಂಗಳ ಕೂಸು..! ವೈದ್ಯರು ಏನ್ಮಾಡಿದ್ರು ?

ಉಡುಪಿ: ನಿಲ್ಲಿಸಿದ್ದ ಬೋಟ್‌ ಗಳಿಂದ ಬೆಲೆ ಬಾಳುವ ಮೀನು ಕಳ್ಳತನ, ಮಧ್ಯರಾತ್ರಿ ಮೀನುಗಾರರ ಕೈಗೆ ಸಿಕ್ಕಿಬಿದ್ದಿದ್ದೇಗೆ ಕಳ್ಳರು..?