Latestಉಪ್ಪಿನಂಗಡಿಕರಾವಳಿನೆಲ್ಯಾಡಿಮಂಗಳೂರುವೈರಲ್ ನ್ಯೂಸ್

ಉಪ್ಪಿನಂಗಡಿ: ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ KSRTC ಬಸ್ ಡಿವೈಡರ್‌ ಗೆ ಡಿಕ್ಕಿ..! 3 ಪ್ರಯಾಣಿಕರಿಗೆ ಗಂಭೀರ ಗಾಯ..!

606
Pc Cr: Vartha bharati

ನ್ಯೂಸ್ ನಾಟೌಟ್: ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ KSRTC ಬಸ್ ಡಿವೈಡರ್‌ ಗೆ ಡಿಕ್ಕಿಯಾದ ಘಟನೆ ಉಪ್ಪಿನಂಗಡಿಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಹೆಚ್‍ ಪಿ ಪೆಟ್ರೋಲ್ ಪಂಪ್‍ ನ ಮುಂಭಾಗದಲ್ಲಿ ಎ.14ರಂದು ರಾತ್ರಿ ನಡೆದಿದೆ.

ಘಟನೆಯಲ್ಲಿ ಬಸ್ ನಲ್ಲಿದ್ದ ದಂಪತಿ ಸಹಿತ 3 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಕುಂದಾಪುರ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿ ಬಸ್ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಡಿವೈಡರ್‌ ಗೆ ಡಿಕ್ಕಿಯಾಗಿದೆ. ಬಸ್ ನ ಟಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರ್‌ ಗೆ ಡಿಕ್ಕಿಯಾಗಿದೆ ಎಂದು ವರದಿ ತಿಳಿಸಿದೆ.

ಘಟನೆಯಲ್ಲಿ ಬಸ್ ನಲ್ಲಿದ್ದ ಚಂದ್ರು (68), ಅವರ ಪತ್ನಿ ಸರೋಜ(60)ಹಾಗೂ ಇನ್ನೊಬ್ಬರು ಪ್ರಯಾಣಿಕರು ಸೇರಿ ಮೂವರು ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದಂತೆ ಬಸ್ಸಿನ ಚಾಲಕ ಸಹಿತ 10 ಮಂದಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

1989 ರಲ್ಲಿ ತನ್ನ ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆಗೈದಿದ್ದ ವ್ಯಕ್ತಿ 20 ವರ್ಷಗಳ ಬಳಿಕ ಅರೆಸ್ಟ್..! ಈ ನಡುವೆ ಬೇರೊಂದು ಮದುವೆಯಾಗಿದ್ದ ಆಸಾಮಿ..!

See also  ಸುಳ್ಯ: ಭಾರೀ ಗೆಲುವಿನತ್ತ ಸಾಗಿದ ಭಾಗೀರಥಿ ಮುರುಳ್ಯ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget