ಕರಾವಳಿಕ್ರೈಂವೈರಲ್ ನ್ಯೂಸ್

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರೋರಾತ್ರಿ ಭೀಕರ ಅಪಘಾತ! ಕೊನೆಯುಸಿರೆಳೆದ ಆ ವ್ಯಕ್ತಿ ಯಾರು?

ನ್ಯೂಸ್ ನಾಟೌಟ್ : ಬೈಕ್ ಹಾಗೂ ಇಕೊಮೆಟ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ನ.1ರ ರಾತ್ರಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ ನಡೆದಿದೆ.

ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸುರೇಂದ್ರ ಮಹತೋ (35) ಎಂದು ಮೃತಪಟ್ಟವರು ಎಂದು ತಿಳಿದು ಬಂದಿದೆ.

ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಂದ್ರ ಮಹತೋ ಬುಧವಾರ ರಂದು ರಾತ್ರಿ ಹೊಸಮಜಲು ಕಡೆಯಿಂದ ನೆಲ್ಯಾಡಿಗೆ ಬೈಕ್‌ ನಲ್ಲಿ ಬರುತ್ತಿದ್ದ ವೇಳೆ ಮಂಗಳೂರಿನಿಂದ ಹಾಸನ ಕಡೆಗೆ ಹೋಗುತ್ತಿದ್ದ ಇಕೊಮೆಟ್ ಕೌಕ್ರಾಡಿ ಗ್ರಾ.ಪಂ.ನ ಮುಂಭಾಗ ಢಿಕ್ಕಿಯಾಗಿದೆ ಎನ್ನಲಾಗಿದೆ.

ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸುರೇಂದ್ರ ಮೆಹತೋ ತಕ್ಷಣ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Related posts

ಗೋವುಗಳ ನೋವಿಗೆ ಬೇಸರ ವ್ಯಕ್ತಪಡಿಸಿದ ಪದ್ಮರಾಜ್,ಕೆಂಜಾರು ಗೋಶಾಲೆಗೆ ಭೇಟಿ ನೀಡಿದ ದ.ಕ. ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ

ಸರ್ಕಾರಿ ಬಸ್ ನಲ್ಲೂ ಬಂತು ಕ್ಯೂಆರ್ ಸ್ಕ್ಯಾನರ್..! ಇನ್ನೂ ಸರ್ಕಾರಿ ಬಸ್ ಗಳಲ್ಲಿ ಕ್ಯಾಶ್ ಇಲ್ಲದೆಯೂ ಪ್ರಯಾಣಿಸ್ಬಹುದಾ..?

ಮಡಿಕೇರಿ: ಕರೆಂಟ್ ಕಂಬಕ್ಕೆ ಬೈಕ್ ಗುದ್ದಿ ಚಿಮ್ಮಿ ಬಿದ್ದ ಯುವಕರು,ಸ್ಥಳದಲ್ಲೇ ಯುವಕರಿಬ್ಬರು ದುರಂತ ಅಂತ್ಯ:ರಾತ್ರಿ ಘಟನೆ ನಡೆದಿದ್ದರೂ ಬೆಳಗ್ಗೆಯವರೆಗೂ ಗೊತ್ತೇ ಆಗಲಿಲ್ಲ..!