ಉಡುಪಿಉಪ್ಪಿನಂಗಡಿಕರಾವಳಿಕ್ರೈಂದಕ್ಷಿಣ ಕನ್ನಡವೈರಲ್ ನ್ಯೂಸ್

ಉಡುಪಿಯ ಗರುಡ ಗ್ಯಾಂಗ್ ಗೆ ಹಣಕಾಸಿನ ನೆರವು ನೀಡಿದ್ದ ಉಪ್ಪಿನಂಗಡಿಯ ಮಹಿಳೆ..! ಆಕೆಯನ್ನು ಬಂಧಿಸಿ ಮಂಗಳೂರಿನ ಕಾರಾಗೃಹದಲ್ಲಿ ಇರಿಸಿದ ಪೊಲೀಸರು..!

ನ್ಯೂಸ್ ನಾಟೌಟ್: ಉಡುಪಿಯ ಕಾಪುವಿನಲ್ಲಿ ರೌಡಿ ಶೀಟರ್ ಗಳಾಗಿ ಗುರುತಿಸಿಕೊಂಡಿರುವ ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ಕಾರಣಕ್ಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಆರೋಪಿಯೊಬ್ಬನ ನಂಟಿದ್ದ ಕಾರಣ ಮಹಿಳೆಯೊಬ್ಬಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕರ್ವೇಲು, ಬಾನೊಟ್ಟು ನಿವಾಸಿ ಝಕರಿಯಾ ಪತ್ನಿ ಸಫಾರ ಯಾನೆ ಸಾಜಿದ (21) ಎಂದು ಗುರುತಿಸಲಾಗಿದೆ. ಗರುಡ ಗ್ಯಾಂಗ್‌ ಸದಸ್ಯರಿಗೆ ಸಫಾರ ಆರ್ಥಿಕ ನೆರವು ಮತ್ತು ಆಶ್ರಯ ವ್ಯವಸ್ಥೆ ಮಾಡಿದ್ದಳು.

ಗ್ಯಾಂಗ್ ಸದಸ್ಯರಿಗೆ ಮೊಬೈಲ್‌ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪವೂ ಸಫಾರ ಯಾನೆ ಸಾಜಿದ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಈಕೆಯನ್ನು ವಿಚಾರಣಾಧೀನ ಕೈದಿಯಾಗಿ ಮಂಗಳೂರಿನ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/07/boy-touches-ibx-wire-kannada-news-19-year-old-nomore
https://newsnotout.com/2024/07/babbu-swami-daiva-kannada-news-theft-kannada-news-tulunadu
https://newsnotout.com/2024/07/elephant-no-more-viral-video-due-to-rail-collision-kannda-news-assam
https://newsnotout.com/2024/07/forest-department-kannada-news-elephant-issue-in-deserve-forest-area
https://newsnotout.com/2024/07/kmf-kananda-news-election-for-congress-and-bjp-kannada-news

Related posts

ಮಾದಕ ವಸ್ತು ಸೇವಿಸಿದ ವ್ಯಕ್ತಿ ಬಾವಿಗೆ ಬಿದ್ದು ಸಾವು

ರೈಲಿನಡಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ..!ಘಟನೆಗೆ ಕಾರಣವೇನು?

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ನೈರ್ಮಲ್ಯ ವಾರಾಚರಣೆ, ವೈಯಕ್ತಿಕ ಸ್ವಚ್ಛತೆ, ಪೋಷಕಾಂಶಯುಕ್ತ ಆಹಾರದ ಕುರಿತು ಪ್ರಾತ್ಯಕ್ಷಿಕೆ