ಉಪ್ಪಿನಂಗಡಿಕರಾವಳಿಕ್ರೈಂರಾಜ್ಯವೈರಲ್ ನ್ಯೂಸ್

ಉಪ್ಪಿನಂಗಡಿ: ಚಲಿಸುತ್ತಿದ್ದ KSRTC ಐರಾವತ ಬಸ್ ನಲ್ಲಿ ಆಕಸ್ಮಿಕ ಅಗ್ನಿ ಅವಘಡ..! ಎಸಿ(Air Conditioner)ಯಲ್ಲಿ ಕಾಣಿಸಿಕೊಂಡ ಬೆಂಕಿ..!

ನ್ಯೂಸ್ ನಾಟೌಟ್: ಕೆ.ಎಸ್.ಆರ್.ಟಿ ಯ ಐರಾವತ ಬಸ್ ಗೆ ಆಕಸ್ಮಿಕವಾಗಿ ಬೆಂಕಿ ಹಿಡಿದ ಘಟನೆ ಉಪ್ಪಿನಂಗಡಿಯ ಹಳೆಗೇಟು ಬಳಿ ಜು.18 ಗುರುವಾರ ಬೆಳಗ್ಗೆ ನಡೆದಿದೆ. ಸ್ಥಳೀಯ ಯುವಕರ ಸಹಾಯದಿಂದ ಬೆಂಕಿ ನಂದಿಸಲಾಗಿದ್ದು, ಭಾರೀ ಅನಾಹುತ ತಪ್ಪಿದೆ.

ಬೆಂಗಳೂರಿನಿಂದ – ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದಾನೆ. ತಕ್ಷಣ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ಕೂಡಲೇ ಯುವಕರು ಮತ್ತು ಅಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರನ್ನು ಬಸ್ಸಿಗೆ ಎರಚಿ ಬೆಂಕಿ ನಂದಿಸಿದ್ದಾರೆ. ಬಸ್ಸಿನ ಹಿಂಬದಿಗೆ ಹಾನಿಯಾಗಿದೆ.

Click 👇

https://newsnotout.com/2024/07/darshan-case-issue-about-food-in-jail-high-court-order-kannada-news/
https://newsnotout.com/2024/07/america-president-kannada-news-covid-possitive-kannada-news-health/

Related posts

ಸುಳ್ಯ: ಕಾರು-ಪಿಕಪ್ ನಡುವೆ ಅಪಘಾತ, ಕಾರಿಗೆ ಅಲ್ಪ ಪ್ರಮಾಣದ ಹಾನಿ

ಎನ್‌ಕೌಂಟರ್‌ಗೆ ಬಲಿಯಾದ ಆರೋಪಿ..! ಆರೋಪಿಯ ಮಗಳಿಗೆ ಅದ್ದೂರಿಯಾಗಿ ಮದುವೆ ಮಾಡಿಸಿದ ಪೊಲೀಸರು..!

ಹಲವು ದಿನಗಳ ಬಳಿಕ ಜಾಮೀನಿಗಾಗಿ ಕೋರ್ಟ್‌ ಮೊರೆ ಹೋದ ಪವಿತ್ರಾ ಗೌಡ..! ಆಗಸ್ಟ್ 22ಕ್ಕೆ ಭವಿಷ್ಯ ನಿರ್ಧಾರ..!