ಕರಾವಳಿ

ಉಪ್ಪಿನಂಗಡಿ: ಚಿಕನ್ ಕಬಾಬ್‌ನಲ್ಲಿ ಹುಳ, ತಹಶೀಲ್ದಾರ್ ದಾಳಿ, ಹೋಟೆಲ್‌ ಗೆ ಬೀಗ

ನ್ಯೂಸ್ ನಾಟೌಟ್: ಊಟಕ್ಕೆಂದು ಹೋಟೆಲ್ ಗೆ ಹೋದ ವ್ಯಕ್ತಿಗೆ ಚಿಕನ್ ಕಬಾಬ್‌ ಜೊತೆಗೆ ಹುಳವೂ ಫ್ರೀಯಾಗಿ ಸಿಕ್ಕಿದೆ. ಇಂತಹದ್ದೊಂದು ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ. ತಕ್ಷಣ ಎಚ್ಚೆತ್ತ ಜಿಲ್ಲಾಡಳಿತ ಈ ಬಗ್ಗೆ ಪುತ್ತೂರು ತಹಶೀಲ್ದಾರ್ ಅವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿತು. ಈ ಪ್ರಕಾರವಾಗಿ ತಹಶೀಲ್ದಾರ್ ನಿಸರ್ಗ ಪ್ರಿಯ, ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ಸೇರಿದಂತೆ ಹಲವು ಅಧಿಕಾರಿಗಳ ತಂಡ ಗುರುವಾರ ರಾತ್ರಿ ಹೋಟೆಲ್ ಮೇಲೆ ದಾಳಿ ನಡೆಸಿದೆ. ಹೋಟೆಲ್ ನಲ್ಲಿ ತಯಾರು ಮಾಡಿ ಇಟ್ಟಿದ್ದ ಆಹಾರ ಖಾದ್ಯಗಳ ಸ್ಯಾಂಪಲ್‌ಗಳನ್ನು ಇದೀಗ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.

ಹೋಟೆಲ್ ನಲ್ಲಿ ಇಂತಹ ಕಲುಷಿತ ಆಹಾರಗಳನ್ನು ನೀಡುತ್ತಿದ್ದಾರೆ ಅನ್ನುವುದು ತಿಳಿದು ಬಂದ ಬಳಿಕ ಇದನ್ನು ತಹಶೀಲ್ದಾರ್ ಪರಿಶೀಲಿಸಿದರು. ಈ ವೇಳೆ ಹೋಟೆಲ್ ಗೆ ಯಾವುದೇ ಪರವಾನಗಿ ಇಲ್ಲದೆ ನಡೆಸುತ್ತಿರುವುದು ಕಂಡು ಬಂದಿದೆ. ತಕ್ಷಣ ಹೋಟೆಲ್ ಮುಚ್ಚಿಸುವುದಕ್ಕೆ ಅಧಿಕಾರಿ ಕ್ರಮ ತೆಗೆದುಕೊಂಡರು. ದಾಳಿ ವೇಳೆ ಸ್ಥಳೀಯ ಪೊಲೀಸರು ಬಿಗಿ ಬಂದೋ ಬಸ್ತ್ ಕೈಗೊಂಡಿದ್ದರು.

Related posts

ಮಂಗಳೂರಿನಲ್ಲಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್..! ಅನ್ಯಕೋಮಿನ ಯುವಕನಿಂದ ಡ್ರಗ್ಸ್ ನಂಟು..?

ಇಂದಿನಿಂದ ಎಲ್‌ಪಿಜಿ ಸಿಲಿಂಡರ್‌ನ ಪರಿಷ್ಕೃತ ದರಗಳು ಪ್ರಕಟ! ಅಗ್ಗವೋ ಅಥವಾ ದುಬಾರಿಯೋ..? ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ , ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆ