ಉಪ್ಪಿನಂಗಡಿಕರಾವಳಿಕ್ರೈಂವೈರಲ್ ನ್ಯೂಸ್

ಉಪ್ಪಿನಂಗಡಿ: ಸಿಬಿಐ ಆಫೀಸರ್ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ..! ಮಗನ ಹೆಸರು ಹೇಳಿ ವ್ಯಕ್ತಿಯಿಂದ ಹಣ ಸುಳಿಗೆಗೆ ಯತ್ನ..!

176

ನ್ಯೂಸ್ ನಾಟೌಟ್: ನಾನು ಸಿಬಿಐ ಆಫೀಸರ್‌ ಮಾತನಾಡುತ್ತಿದ್ದೇನೆ. ಇಂತಹಾ ಹೆಸರಿನವನು ನಿಮ್ಮ ಮಗನಾ? ಅವನ ಚಟುವಟಿಕೆಯ ಬಗ್ಗೆ ನಿಮಗೆ ಅರಿವಿದೆಯಾ? ಅವನನ್ನು ತಕ್ಷಣ ಬಂಧಿಸಬೇಕಾಗುತ್ತದೆ. ಎಂದೆಲ್ಲಾ ಬೆದರಿಸಿ ಹಣ ಸುಲಿಗೆ ಮಾಡುವ ಜಾಲದ ಕರೆಯೊಂದು ಉಪ್ಪಿನಂಗಡಿ ನಿವಾಸಿಗೆ ಬಂದಿದ್ದು, ಸಮಯಪ್ರಜ್ಞೆಯ ವಂಚನೆಯಿಂದ ಪಾರಾಗಿದ್ದಾರೆ.

ಉಪ್ಪಿನಂಗಡಿಯ ಬ್ಯಾಂಕ್‌ ರಸ್ತೆಯ ನಿವಾಸಿ ಅಬ್ಟಾಸ್‌ ಅವರ ಮೊಬೈಲ್‌ಗೆ 92-3471745608 ಸಂಖ್ಯೆಯಿಂದ ಕರೆಯೊಂದು ಬಂದಿದ್ದು, ಹಿಂದಿ ಭಾಷೆಯಲ್ಲಿ ತಾನು ಸಿಬಿಐ ಆಫೀಸರ್‌ ಆಗಿದ್ದು, ದಿಲ್ಲಿ ಕಚೇರಿಯಿಂದ ಮಾತಾನಾಡುತ್ತಿದ್ದೇನೆ. ಅಬ್ಟಾಸ್‌ ಅವರ ಪ್ರಥಮ ವರ್ಷದ ಎಂಜಿನಿಯರಿಂಗ್‌ ಕಲಿಯುತ್ತಿರುವ ಮಗನ ಹೆಸರನ್ನು ಉಲ್ಲೇಖೀಸಿ ಮಾತನಾಡಿದ್ದಾನೆ. ಕರೆ ಬಂದ ನಂಬರ್‌ನ ಪ್ರೊಫೈಲ್‌ ಪೋಟೋ ಕೂಡಾ ಪೊಲೀಸ್‌ ಆಫೀಸರ್‌ನಂತಿರುವ ವ್ಯಕ್ತಿಯದ್ದಾಗಿತ್ತು. ನಂಬರಿನ ಕೆಳಗಡೆ ಸಿಬಿಐ ಎಂದೂ ದಾಖಲಿಸಲ್ಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Click

https://newsnotout.com/2024/10/babies-nomore-kananda-news-children-k-viral-issue/
https://newsnotout.com/2024/10/fire-on-self-govinda-actor-of-bollywwod-kannada-news-gun/
https://newsnotout.com/2024/10/super-star-rajanikanth-kannada-news-hospitalized-76-year-old/
See also  ಸೌಜನ್ಯ ಪ್ರಕರಣದ ಮರು ತನಿಖೆಗೆ ತೀವ್ರಗೊಂಡ ಒತ್ತಾಯ, ಸುಳ್ಯದಲ್ಲಿ ಗೌಡರ ಯುವ ಸೇವಾ ಸಂಘದಿಂದ ವಾಹನ ಜಾಥಾ, ತಹಶೀಲ್ದಾರ್‌ಗೆ ಮನವಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget