ಕ್ರೈಂ

ಉಪ್ಪಿನಂಗಡಿ: ಹಿಂದೂ ಕಾರ್ಯಕರ್ತನಿಗೆ ಚೂರಿ ಇರಿತ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ, ಪರಿಸ್ಥಿತಿ ಗಂಭೀರ

780

ಉಪ್ಪಿನಂಗಡಿ : ಇಲ್ಲಿನ ಸಮೀಪದ ಹಳೇ ಗೇಟು ಎಂಬಲ್ಲಿ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತನ ಮೇಲೆ ಮುಸುಕುದಾರಿಗಳ ತಂಡವೊಂದು ದಾಳಿ ನಡೆಸಿ‌ ಚೂರಿ ಇರಿದ ಘಟನೆ ಇಂದು ಸಂಜೆ ನಡೆದಿರುವ ಬಗ್ಗೆ ವರದಿಯಾಗಿದೆ. ಉಪ್ಪಿನಂಗಡಿ ಕಜೆಕಾರು ನಿವಾಸಿ ಅಶೋಕ್‌ ಶೆಟ್ಟಿ ಹಲ್ಲೆಗೊಳಗಾದ ವ್ಯಕ್ತಿ.

ಉಪ್ಪಿನಂಗಡಿಯ ಹಳೇ ಗೇಟು ಬಳಿ ಮೀನಿನ ವ್ಯಾಪಾರ ನಡೆಸುವ ಇವರು ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಎಂದು ಹೇಳಲಾಗುತ್ತಿದ್ದು,ಗಂಭೀರ ಗಾಯಗೊಂಡಿರುವ ಅವರಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಮಾಹಿತಿಗಳ ಪ್ರಕಾರ ಮುಸುಕುಧಾರಿಗಳ ತಂಡವೊಂದು ಈ ಕೃತ್ಯ ಎಸಗಿರುವುದಾಗಿ ಹೇಳಲಾಗುತ್ತಿದೆ. ಅಂಗಡಿ ಬಳಿ ನಿಂತಿದ್ದ ಆಶೋಕ್‌ ಮೇಲೆ ಏರಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಚೂರಿಯಲ್ಲಿ ಇರಿದು ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.

See also  ಸುಳ್ಯಕ್ಕೆ ಬರುತ್ತಿದ್ದ ಕಾರು ಬಂದಡ್ಕ ಕಾಡಿನ ಮಧ್ಯೆ ಪಲ್ಟಿ..! ರಕ್ಷಣೆಗಾಗಿ ಕೆಲ ಹೊತ್ತು ಪರದಾಡಿದ ಪ್ರಯಾಣಿಕರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget