ನ್ಯೂಸ್ ನಾಟೌಟ್: ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ದುರ್ಬಲಗೊಂಡ ಪಕ್ಕಾಸು ಮತ್ತು ರೀಪ್ ಗಳಿದ್ದರೂ ಕ್ಯಾರೇ ಎನ್ನದೇ ತರಗತಿಗಳು ನಡೆಯುತ್ತಿದ್ದು ಇದೀಗ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಪುತ್ತೂರಿನ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಎಲ್ಲರನ್ನು ತೀವ್ರ ಆತಂಕಕ್ಕೊಳಪಡಿಸಿದೆ.ಕುಸಿಯುವ ಭೀತಿಯಲ್ಲಿ ಮೇಲ್ಛಾವಣಿಯಿದ್ದರೂ ಕೂಡ ಅದೇ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಆದರೆ, ಅದೃಷ್ಟವಶಾತ್ ಮೇಲ್ಛಾವಣಿ ಭಾನುವಾರ ಕುಸಿದಿರುವುದರಿಂದ ಯಾವುದೇ ವಿದ್ಯಾರ್ಥಿಗಳು ಹಾಜರಾಗದಿದ್ದ ಕಾರಣ ಸಂಭವನೀಯ ಭಾರಿ ಅನಾಹುತ ತಪ್ಪಿದೆ.