ದೇಶ-ಪ್ರಪಂಚ

‍“ಚೀಪ್ ಚೀಪ್” ಅಂದ್ರೆ ಏನದು? ದೊಡ್ಡದು…ಚಿಕ್ಕದು…ಯಾರದ್ದು? ಈ ಬಗ್ಗೆ ರಿಯಲ್ ಸ್ಟಾರ್ ಉಪ್ಪಿ ಕೊಟ್ಟ ಉತ್ತರ ಹೀಗೆ ನೋಡಿ..

ನ್ಯೂಸ್‌ ನಾಟೌಟ್ :ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಚಿತ್ರ ಯುಐ ಚಿತ್ರೀಕರಣ ಭರದಿಂದ ಸಾಗುತ್ತಿದೆ.ಉಪ್ಪಿ ಅಂದ್ರೆ ಬುದ್ದಿವಂತ..ಈ ನಿರ್ದೇಶಕನಿಗೆ ಸರಿ ಸಾಟಿ ಯಾರೂ ಇಲ್ಲ ಎಂಬ ಮಾತಿದೆ.ಅಂದ್ರೆ ಯಾವಾಗ್ಲೂ ಡಿಫರೆಂಟ್‌ ಆಗಿಯೇ ಯೋಚನೆ ಮಾಡಿ ವಿಭಿನ್ನ ಚಿತ್ರವನ್ನು ತೆರೆ ಮೇಲೆ ತರುವಲ್ಲಿ ಉಪ್ಪಿ ಯಶಸ್ವಿಯಾಗಿದ್ದಾರೆ. ಅದು ನಿಮ್ಗೂ ಗೊತ್ತಿರುವ ವಿಚಾರವೂ ಹೌದು..ಇದೀಗ ಮೊನ್ನೆಯಷ್ಟೇ ಉಪ್ಪಿ ಅಭಿನಯದ ಹಾಡೊಂದು ತೆರೆ ಮೇಲೆ ಬಂದಿದ್ದು ಅವರ ಅಭಿಮಾನಿಗಳು ಬಿದ್ದು ಬಿದ್ದು ನಕ್ಕಿದಂತು ಸುಳ್ಳಲ್ಲ.. !

ಯೆಸ್‌, ಇತ್ತೀಚೆಗಷ್ಟೇ ಚಿತ್ರದ ಒಂದು ಹಾಡಿನ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ಉಪ್ಪಿಗೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಗಳು ಲಭಿಸಿತ್ತು.ಮಾತ್ರವಲ್ಲ ಹಲವಾರು ಮಂದಿ ಉಪ್ಪಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳತೊಡಗಿದ್ದಾರೆ.ಈ ಕುರಿತಂತೆ ಅಭಿಮಾನಿಗಳಲ್ಲಿಯೂ ಸಹ ಸಾಕಷ್ಟು ಗೊಂದಲ ಹುಟ್ಟಿಕೊಂಡಿತ್ತು.ಇದೇ ಬಗೆಹರಿದಿಲ್ಲ ಆಗಲೇ ಮತ್ತೊಂದು ಅನಿವಾರ್ಯ ಕಾರಣ ಹೊರಬಿದ್ದಿದೆ.

ಅಸಲಿಗೆ ಏನಿದು ಅನಿವಾರ್ಯ ಕಾರಣಗಳಿಂದ ಎಂಬುದು ಸದ್ಯ ಎಲ್ಲರ ಪ್ರಶ್ನೆಯಾಗಿದೆ.ಸದಾ ಡಿಫರೆಂಟ್ ಆಗಿ ತೋರಿಸುವುದು,ಚಿತ್ರರಸಿಕರ ತಲೆಗೆ ಹುಳಬಿಡುವುದು ಉಪೇಂದ್ರ ಅವರ ರಿಯಲ್ ಸ್ಟೈಲ್​.ಇನ್ನೊಂದು ವಿಚಾರವೆಂದ್ರೆ ಕರಿಮಣಿ ಮಾಲೀಕ ನೀನಲ್ಲ ಎನ್ನುವ ೨೫ ವರ್ಷಗಳ ಹಿಂದಿನ ಹಾಡೊಂದು ಇತ್ತೀಚೆಗೆ ವೈರಲ್ ಆಗಿರುವ ಬಗೆಗಿನ ವಿಚಾರ ನಿಮ್ಗೆ ಗೊತ್ತೆ ಇದೆ.ಒಂದೇ ಪದದಲ್ಲಿ ಎರಡೆರಡು ಅರ್ಥವನ್ನ ಹೇಳುವ ಹಾಡೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.ಇದೀಗ ಅದೇ ರೀತಿಯಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಾ ಹಾಗೂ ವಿಭಿನ್ನವಾಗಿರುವ ‘ಚೀಪ್ ಚೀಪ್’ ಲಿರಿಕಲ್ ವಿಡಿಯೋ ಕೂಡ ಸದ್ಯದಲ್ಲೇ ಹೊರಬೀಳಲಿದೆ.ಈ ಬಗ್ಗೆ ಉಪ್ಪಿ ಹೇಳುತ್ತಾ ಶೀಘ್ರವೇ ನಿಮ್ಮ ಮುಂದೆ ಚೀಪ್ ಚೀಪ್ ಹಾಡು ಬರಲಿದೆ ಎಂದು ನಟ ಸ್ಪಷ್ಟಪಡಿಸಿದ್ದಾರೆ.ಅದರ ದಿನಾಂಕ ಮತ್ತು ವೇಳೆಯನ್ನು ಕೂಡ ಅಧಿಕೃತವಾಗಿ ಪೋಸ್ಟರ್​ ಮುಖೇನ ತಿಳಿಸಿದ್ದಾರೆ.

“ಚೀಪ್ ಚೀಪ್” ಏನದು? ದೊಡ್ಡದು…ಚಿಕ್ಕದು…ಯಾರದ್ದು? ಇದು ಬಹಳ ಸೂಕ್ಷ್ಮವಾದ ವಿಷಯ. ಯಾರದ್ದು ಚಿಕ್ಕದು, ಯಾರದ್ದು ದೊಡ್ಡದು? ಎಂಬ ವಿಷಯ ಬಹಿರಂಗವಾದರೆ ಅದಾಗಿ ಹೋಗುತ್ತದೆ. ಅದಾಗಿಹೋಗುತ್ತದೆ ಎಂದರೆ ಏನು? “ಅದು” ಏನಾಗುತ್ತದೆ? ಎಂದು ಮಾರ್ಚ್ 4ನೇ ತಾರೀಕು ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ನಿಮಗೆ ಗೊತ್ತಾಗುತ್ತದೆ ಎಂದು ಪೋಸ್ಟರ್​ ಹಾಗೂ ಕಿರು ವಿಡಿಯೋ ಮೂಲಕ ನಟ ಅಪ್ಡೇಟ್ ಕೊಟ್ಟಿದ್ದಾರೆ.

Related posts

ಇಸ್ರೋದಿಂದ ಮಾನವಸಹಿತ ‘ಗಗನಯಾನ’​ದ ಮೊದಲ ಹಾರಾಟ..? ಪರೀಕ್ಷಾ ದಿನಾಂಕ ಘೋಷಿಸಿದ ಇಸ್ರೋ

ಸಂಪಾಜೆ: ಮತದಾನ ಮಾಡೋಕೆ ‘ಅನಾಥ ಅಜ್ಜಿ’ಗೆ ಸಿಗಲಿಲ್ಲ ಅವಕಾಶ..! ತೆವಳುತ್ತಾ ನಡೆಯುವ ಹಿರಿ ಜೀವಕ್ಕೆ ಸಿಗದ ಓಟು ಭಾಗ್ಯ, ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ..?

5 ವರ್ಷಗಳ ಬಳಿಕ ಅಟ್ಲಾಂಟಿಕ್ ಸಾಗರದಲ್ಲಿ ಪತನಗೊಂಡದ್ದೇಕೆ ಆ ಉಪಗ್ರಹ? 200 ಮೈಲುಗಳಷ್ಟು ಎತ್ತರದಿಂದ ಬೀಳಲು ಕಾರಣವೇನು?