ಕರಾವಳಿಸುಳ್ಯ

ಸುಳ್ಯ:ಸೈಂಟ್ ಜೋಸೆಫ್ ಫ್ರೌಢಶಾಲೆಯಲ್ಲಿ ‘ವಿದ್ಯಾರ್ಥಿ ಸಂಸತ್ತು ಅಧಿವೇಶನ’ ಕಾರ್ಯಕ್ರಮ

ನ್ಯೂಸ್ ನಾಟೌಟ್ : ಸುಳ್ಯದ ಸೈಂಟ್ ಜೋಸೆಫ್ ಫ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಅಧಿವೇಶನ ಕಾರ್ಯಕ್ರಮ ನಡೆಯಿತು.

9ನೇ ತರಗತಿ ವಿದ್ಯಾರ್ಥಿಗಳ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಶಾಲಾ ಶಿಕ್ಷಕ ಪುರುಷೋತ್ತಮ ಅವರು ಬಿ. ಸಂಸತ್ ಅಧಿವೇಶನದಲ್ಲಿ ಸಭಾಪತಿಯ ಪಾತ್ರ , ನಿರ್ವಹಣೆ , ಕರ್ತವ್ಯ ಆಡಳಿತ ಪಕ್ಷ ಮತ್ತು ವಿರೋಧಪಕ್ಷ ಗಳ ಕಾರ್ಯವೈಖರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು .

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ, ಸಿಸ್ಟರ್ ಬಿನೋಮಾ ಅಧಿವೇಶನದ ಪ್ರಾಮುಖ್ಯತೆ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ವಿವರ ನೀಡಿದರು. ಬಳಿಕ ಅಧಿವೇಶನ ಮತ್ತು ವಿರೋಧಪಕ್ಷಗಳ ಬಗ್ಗೆ ಲೋಪದೋಷಗಳ ಬಗ್ಗೆ ಚರ್ಚಿಸಲಾಯಿತು. Does School detention do any good in school ವಿಷಯದ ಬಗ್ಗೆ ಚರ್ಚಿಸಲಾಯಿತು.

ಶಾಲಾ ಶಿಕ್ಷಕ ಪುರುಷೋತ್ತಮ ಬಿ ಮತ್ತು ಶಿಕ್ಷಕಿ ರೀಟಾ ಲತಾ ಕಾರ್ಯಕ್ರಮವನ್ನು ಸಂಯೋಜಿಸಿದರು.ಈ ಸಂದರ್ಭದಲ್ಲಿ ಶಿಕ್ಷಕ ವೃಂದ , ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಭಿರಾಮ್ ಸ್ವಾಗತ ಮಾಡಿದರು. ವಿದ್ಯಾರ್ಥಿನಿ ಧ್ವನಿ ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿನಿ ಜೀವಿಕಾ ವಂದಿಸಿದರು.ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.

Related posts

ಸುಳ್ಯ: ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ವೈಭವದ ಬ್ರಹ್ಮರಥೋತ್ಸವ, ಈ ಸಂಭ್ರಮದ ಕ್ಷಣಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ

ಭೂಕಂಪಕ್ಕೂ ಮುನ್ನ ಮನೆ ಮೇಲೆ ಕುಸಿದ ಭಾರೀ ಗುಡ್ಡ..!

ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದದ್ದೇಕೆ ಹೈಕೋರ್ಟ್..? ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಿದ್ದೇಕೆ ಕೋರ್ಟ್?