ಕರಾವಳಿಸುಳ್ಯ

ಸುಳ್ಯ : ಮಾರ್ಚ್ 7 ರಂದು (ನಾಳೆ) ವಿದ್ಯುತ್ ವ್ಯತ್ಯಯ

268

ನ್ಯೂಸ್ ನಾಟೌಟ್ : ಮಸ್ಕಾಂ ಸುಳ್ಯ ಉಪ ವಿಭಾಗದ ವ್ಯಾಪ್ತಿಯ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸ ಇರುವುದರಿಂದ ಮಾರ್ಚ್ 7 ರಂದು ಕರೆಂಟ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಮೆಸ್ಕಾಂ ಸುಳ್ಯ ಉಪವಿಭಾಗದ ವ್ಯಾಪ್ತಿಯ 33/11 ಕೆವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್ ಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವದರಿಂದ ಸುಳ್ಯ 1 , ಕೇರ್ಪಳ, ಸುಳ್ಯ 2 ಶ್ರೀರಾಂಪೇಟೆ, ಜಬಳೆ, ಡಿಪೋ, ಸಂಪಾಜೆ, ಕೋಲ್ಚಾರು, ಕಾವು, ಅಜ್ಜಾವರ, ಕೇನ್ಯ, ಅರಂತೋಡು, ಮಂಡೆಕೋಲು ಫೀಡರ್ ಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸುಳ್ಯ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

See also  ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಶೇ.99.17 ಫಲಿತಾಂಶದೊಂದಿಗೆ ಮಿಂಚಿದ ಸುಳ್ಯದ NMPUC ವಿದ್ಯಾರ್ಥಿಗಳು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget