ಕರಾವಳಿಕೊಡಗುಪುತ್ತೂರುರಾಜಕೀಯಸುಳ್ಯ

ಕಾರ್ಕಳದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪವರ್ ಶೋ,ಈ ಬಾರಿಯೂ ಕಮಲ ಅರಳಿಸಲು ತಂತ್ರ

ನ್ಯೂಸ್ ನಾಟೌಟ್ :ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಪ್ರಚಾರ ಕಾರ್ಯ ರಂಗೇರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ದೇಶ ಮಟ್ಟದ ಸ್ಟಾರ್ ಪ್ರಚಾರಕರ ಎಂಟ್ರಿಯಾಗುತ್ತಿದೆ.ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಕಳಕ್ಕೆ ಭೇಟಿ ಕೊಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಕಾರ್ಕಳದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಾರಿಯೂ ಚುನಾವಣೆಯಲ್ಲಿ ಕಮಲ ಅರಳಿಸಲು ಕೇಸರಿ ಪಡೆ ಹಲವು ಪ್ರಯತ್ನಗಳು, ತಂತ್ರಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ದೇಶ ಮಟ್ಟದಲ್ಲಿ ಬಿಜೆಪಿಯ ವರ್ಚಸ್ವಿ ನಾಯಕ ಬುಲ್ಡೋಜರ್ ಬಾಬಾ ಎಂದೇ ಕರೆಯಲ್ಪಡುವ ಯೋಗಿ ಆದಿತ್ಯನಾಥ್ ಅವರು ಕಾರ್ಕಳಕ್ಕೆ ಆಗಮಿಸಲಿದ್ದಾರೆ.ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿಯೂ ಚುನಾಣಾ ಪ್ರಚಾರ ಮಾಡಲಿದ್ದು, ಮಧ್ಯಾಹ್ನ 12:೩೦ಕ್ಕೆ ಪುತ್ತೂರಿಗೆ ಆಗಮಿಸಲಿದ್ದಾರೆ. 2 ಗಂಟೆಗೆ ಬಂಟ್ವಾಳಕ್ಕೆ ತೆರಳಿ ಮದ್ಯಾಹ್ನ 3:30 ಕಾರ್ಕಳಕ್ಕೆ ಭೇಟಿ ನೀಡಲಿದ್ದಾರೆ.ಹೊನ್ನಾವರಕ್ಕೆ ಭೇಟಿ ನೀಡಿದ ಬಳಿಕ ಮುರುಡೇಶ್ವರದಲ್ಲಿ ವಾಸ್ತವ್ಯವಿರಲಿದ್ದಾರೆ ಎಂದು ತಿಳಿದು ಬಂದಿದೆ.

Related posts

ಸುಳ್ಯ ತಾಲೂಕಿನ ಶಾಲಾ-ಕಾಲೇಜಿಗೆ ಜುಲೈ 25 ರಂದು ಕೂಡ ರಜೆ , ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಘೋಷಣೆ

ಕೆವಿಜಿ ಮಾತೃಸಂಸ್ಥೆ NMCಯಲ್ಲಿ ಡಾ. ಕೆವಿಜಿ ಜನ್ಮ ದಿನಾಚರಣೆ ಹಾಗೂ ಪುಷ್ಪ ನಮನ ಕಾರ್ಯಕ್ರಮ

ಬೆನ್ನ ಹಿಂದೆ ಮಾತನಾಡುವವರಿಗೆ ಕ್ಯಾರೇ ಮಾಡದ ನಿರೂಪಕಿ ಅನುಶ್ರೀ..!,ಜನರ ಪ್ರೀತಿ ಮುಂದೆ ಈ ಕಾಮೆಂಟ್‌ ಎಲ್ಲ ಯಾವ ಲೆಕ್ಕ..!ಅಷ್ಟಕ್ಕೂ ಆ ಕಾಮೆಂಟ್‌ ಯಾವುದು ಗೊತ್ತಾ?