ದೇಶ-ವಿದೇಶವೈರಲ್ ನ್ಯೂಸ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಲಿ ಭಾರತ ಎಂದು ಫ್ರಾನ್ಸ್ ಅಧ್ಯಕ್ಷರ ಒತ್ತಾಯ ..! ಚೀನಾ ವಿರೋಧ

230

ನ್ಯೂಸ್ ನಾಟೌಟ್ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸುವಂತೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ಒತ್ತಾಯಿಸಿದ್ದಾರೆ. ಯುಎನ್‌ಎಸ್‌ಸಿಯನ್ನು (UNSC) ಹೆಚ್ಚು ಒಳಗೊಳ್ಳಲು ಮತ್ತು ಪ್ರತಿನಿಧಿಸಲು ಬ್ರೆಜಿಲ್, ಜಪಾನ್, ಜರ್ಮನಿ ಮತ್ತು ಆಫ್ರಿಕಾದ ಎರಡು ದೇಶಗಳ ಉಮೇದುವಾರಿಕೆಯನ್ನು ಬೆಂಬಲಿಸಬೇಕು ಎಂದು ಹೇಳಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಯುಎನ್ ಅನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕಿದೆ. ಅದಕ್ಕಾಗಿಯೇ ಫ್ರಾನ್ಸ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸುವ ಪರವಾಗಿದೆ. ಜರ್ಮನಿ, ಜಪಾನ್, ಭಾರತ (India) ಮತ್ತು ಬ್ರೆಜಿಲ್ ಖಾಯಂ ಸದಸ್ಯರಾಗಿರಬೇಕು. ಜೊತೆಗೆ ಆಫ್ರಿಕಾ ನಿರ್ಧರಿಸುವ ಎರಡು ದೇಶಗಳು ಅವರನ್ನು ಪ್ರತಿನಿಧಿಸಲು ಅವಕಾಶ ನೀಡಬೇಕು ಎಂದರು.

ಸದ್ಯ ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್ ಮತ್ತು ಬ್ರಿಟನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನವನ್ನು ಹೊಂದಿವೆ. ಅಮೆರಿಕಾ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳು ಭಾರತವನ್ನು ಈ ಪ್ರಬಲ ಗುಂಪಿನ ಭಾಗವಾಗಬೇಕೆಂದು ಪ್ರತಿಪಾದಿಸಿವೆ. ಆದರೆ, ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.

See also  ನಟ, ರಾಜಕಾರಣಿ, ಮಾಜಿ ಐಎಎಸ್​ ಅಧಿಕಾರಿ ದಿವಂಗತ ಕೆ.ಶಿವರಾಮ್ ಪತ್ನಿ ಕಾಂಗ್ರೆಸ್​ಗೆ ಸೇರ್ಪಡೆ, ಪತಿ ಗುರುತಿಸಿಕೊಂಡಿದ್ದ ಬಿಜೆಪಿ ಪಕ್ಷದ ಬಗ್ಗೆ ಅಸಮಾಧಾನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget