ಕ್ರೈಂವೈರಲ್ ನ್ಯೂಸ್

ವಿಶ್ವವಿದ್ಯಾಲಯದ 190 ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ ಮಾಡಿದ್ದೇಕೆ..? ಸಾಮಾಜಿಕ ಜಾಲತಾಣದಲ್ಲಿ ವರದಿ ಜೊತೆಗೆ ಹೆಸರು,ಫೋನ್ ನಂಬರ್ ವೈರಲ್!

178

​​​​​​ ನ್ಯೂಸ್ ನಾಟೌಟ್: ವಿಶ್ವವಿದ್ಯಾಲಯದ 190 ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆಯ ವರದಿ, ಅವರ ಹೆಸರು ಹಾಗೂ ಸಂಪೂರ್ಣ ವಿಳಾಸ ವಿಶ್ವವಿದ್ಯಾಲಯದ ಸಾಮಾಜಿಕ ಮಾಧ್ಯಮ ಗುಂಪಿನಲ್ಲಿ ಶೇರ್​​ ಮಾಡಲಾಗಿದೆ. ಈ ಸುದ್ದಿ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಕಜಕಿಸ್ತಾನದ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವ ಸಯಾಸತ್ ನುರ್ಬೆಕ್ ಮಾತಾಡಿ ‘ ವಿದ್ಯಾರ್ಥಿನಿಯರ ಖಾಸಗಿತನದ ಉಲ್ಲಂಘನೆಯಾಗಿದೆ.

ಇದಕ್ಕೆ ಕಾರಣರಾದವರೆಲ್ಲರೂ ಕಾನೂನಿನ ಅಡಿಯಲ್ಲಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ಕಜಕಿಸ್ತಾನದ ಅಲ್ ಫರಾಬಿ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಈ ಘಟನೆ ನಡೆದಿದೆ. ‘ಡೈಲಿ ಸ್ಟಾರ್’ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರತಿಷ್ಠಿತ ಅಲ್ ಫರಾಬಿ ರಾಷ್ಟ್ರೀಯ ವಿಶ್ವವಿದ್ಯಾಲಯದ ಕೆಲವು ವೈದ್ಯಕೀಯ ಅಧಿಕಾರಿಗಳು ತಮ್ಮದೇ ವಿಶ್ವವಿದ್ಯಾಲಯದ 190 ವಿದ್ಯಾರ್ಥಿನಿಯರ ಕನ್ಯತ್ವದ ಸ್ಥಿತಿಯನ್ನು ಅವರ ಹೆಸರು ಹಾಗೂ ಸಂಪೂರ್ಣ ವಿಳಾಸದೊಂದಿಗೆ ಲೀಕ್​​​​ ಮಾಡಿದೆ.

ಆದರೆ ವಿಶ್ವವಿದ್ಯಾನಿಲಯದಲ್ಲಿ ಕನ್ಯತ್ವ ಪರೀಕ್ಷೆ ವರದಿ(Virginity Status) ಏಕೆ ಮಾಡಲಾಯಿತು? ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ. ವಿಶ್ವವಿದ್ಯಾಲಯದ ಈ ಕ್ರಮದಿಂದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ವಿದ್ಯಾರ್ಥಿನಿಯರ ಈ ವಿವರಗಳು ಸೋರಿಕೆಯಾದ ತಕ್ಷಣ, ಇದು ವಿಶ್ವವಿದ್ಯಾಲಯದ ಸಾಮಾಜಿಕ ಮಾಧ್ಯಮ ಗುಂಪಿನಲ್ಲಿ ಬಹಳ ವೇಗವಾಗಿ ವೈರಲ್ ಆಗಿದೆ. ಆದರೆ ಕನ್ಯತ್ವ ಪರೀಕ್ಷೆ ಏಕೆ ಮಾಡಲಾಯಿತು? ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ.

ವಿಶ್ವವಿದ್ಯಾನಿಲಯದ ವೈದ್ಯಕೀಯ ಕೇಂದ್ರದಲ್ಲಿ ವಿದ್ಯಾರ್ಥಿನಿಯರನ್ನು ಕೆಲವು ಸ್ತ್ರೀರೋಗ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ವಿಶ್ವವಿದ್ಯಾನಿಲಯದಲ್ಲಿ ಇಂತಹ ಪರೀಕ್ಷೆಗಳು ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಈ ಸುದ್ದಿ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಕಜಕಿಸ್ತಾನದ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವ ಸಯಾಸತ್ ನುರ್ಬೆಕ್ ಮಾತಾಡಿ ‘ಇದು ವಿದ್ಯಾರ್ಥಿನಿಯರ ಖಾಸಗಿತನದ ಉಲ್ಲಂಘನೆಯಾಗಿದೆ. ಇದಕ್ಕೆ ಕಾರಣರಾದವರೆಲ್ಲರೂ ಕಾನೂನಿನ ಅಡಿಯಲ್ಲಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ತನಿಖೆ ಈಗಾಗಲೇ ಪ್ರಾರಂಭವಾಗಿದೆ’ ಎಂದು ಹೇಳಿದ್ದಾರೆ.

See also  ಸೆಕ್ಯೂರಿಟಿ ಕೆಲಸಕ್ಕೆ ಹೋದ ಭಾರತೀಯರನ್ನು ಯುದ್ಧ ಭೂಮಿಗೆ ಕಳಿಸಿ ಕೊಂದ ರಷ್ಯಾ..!, 13 ಜನರಲ್ಲಿ ಮೂವರ ದುರಂತ ಅಂತ್ಯವಾಗಿದ್ದೇಗೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget