ಕ್ರೀಡೆರಾಜ್ಯಶಿಕ್ಷಣಸುಳ್ಯ

ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟದಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ದ್ವಿತೀಯ, ಕಾಲೇಜು ವತಿಯಿಂದ ಅಭಿನಂದನೆ

ನ್ಯೂಸ್ ನಾಟೌಟ್: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಅ. 29 ರಂದು ನಡೆದ ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟದಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ವಿತೀಯ ಬಿ.ಎ.ಎಂ.ಎಸ್ ವಿದ್ಯಾರ್ಥಿನಿ ಕು. ವೈಷ್ಣವಿ ಬಟಕುರ್ಕಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ .

ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ಈ ಸ್ಪರ್ಧೆ ನಡೆದಿದೆ. ಗುಡ್ಡಗಾಡು ಓಟದಲ್ಲಿ ಸಂಸ್ಥೆಯ ಕು. ವೈಷ್ಣವಿ ಬಟಕುರ್ಕಿ, ಕು. ರಾಧಾ ಪವರ್ ಮಿ. ಬಸವರಾಜ್, ಮಿ. ಗದಗಯ್ಯ ಈರಣ್ಣ, ಮಿ.ಶ್ರೀನಿವಾಸ್ ಭಾಗವಹಿಸಿದ್ದರು.

ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್(ರಿ.) ಸುಳ್ಯದ ಅಧ್ಯಕ್ಷರಾದ ಡಾ. ಚಿದಾನಂದ ಕೆ ವಿ, ಪ್ರಧಾನ ಕಾರ್ಯದರ್ಶಿಗಳಾದ ಮಿ. ಅಕ್ಷಯ್ ಕೆ ಸಿ, ಉಪಾಧ್ಯಕ್ಷರಾದ ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ ಸಿ ಜೊತೆ ಕಾರ್ಯದರ್ಶಿಗಳಾದ ಹೇಮನಾಥ್ ಕೆ.ವಿ, ಕೋಶಾಧಿಕಾರಿಗಳಾದ ಡಾ. ಗೌತಮ್ ಗೌಡ, ಕೌನ್ಸಿಲ್ ಸದಸ್ಯರುಗಳಾದ ಜಗದೀಶ್ ಅಡ್ತಲೆ, ಮೀನಾಕ್ಷಿ ಕೆ.ಎಚ್., ಧನಂಜಯ ಮದುವೆಗದ್ದೆ, ಪ್ರೊಫೆಸರ್ ದಾಮೋದರ್ ಗೌಡ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾದರ್ ಡಿ.ವಿ., ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Click

https://newsnotout.com/2024/10/darshan-thugudeepa-got-bail-kannada-news-viral-news-d/
https://newsnotout.com/2024/10/house-car-issue-cctv-putage-viral-news-madyapradesh/
https://newsnotout.com/2024/10/social-media-kananda-news-7-people-arrested-viral-news-s/
https://newsnotout.com/2024/10/yash-acting-kannada-cinema-toxic-tree-cutting-eshwar-kandre-allegation/
https://newsnotout.com/2024/10/goa-and-karnataka-police-join-operation-kannada-news-v-thief/

Related posts

ಸುಳ್ಯ : ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಪ್ರಥಮ ಬಿ.ಎ.ಎಂ.ಎಸ್ ಓರಿಯೆಂಟೇಶನ್ ಕಾರ್ಯಕ್ರಮ,ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಎಓಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ

ಕಗ್ಗತ್ತಲಲ್ಲಿ ಸಂಪಾಜೆಯ ಜನ..! ಸತತ 2 ದಿನದಿಂದ ಕರೆಂಟ್ ಇಲ್ಲ..! ಕೆಲವು ತಿಂಗಳಿಂದ ಕರೆಂಟ್ ಕೊಡದೆ ಸತಾಯಿಸುತ್ತಿದೆ ವಿದ್ಯುತ್ ಇಲಾಖೆ

ಸುಳ್ಯ: ಡಿ. 9,10ಕ್ಕೆ ಬ್ರಾಹ್ಮಣ ಸಂಘ (ರಿ)ದಿಂದ ವಿಪ್ರ ಸಮಾವೇಶ,ಕಲ್ಮಡ್ಕದಲ್ಲಿ ಕಾರ್ಯಕ್ರಮ ಆಯೋಜನೆ