Latestದೇಶ-ವಿದೇಶವಿಡಿಯೋವೈರಲ್ ನ್ಯೂಸ್

ವಿವಿ ಕಾಲೇಜಿನ ತರಗತಿ ಗೋಡೆಗಳಿಗೆ ಹಸುವಿನ ಸೆಗಣಿ ಲೇಪಿಸಿದ ಪ್ರಾಂಶುಪಾಲೆ..! ವಿಡಿಯೋ ವೈರಲ್

886

ನ್ಯೂಸ್ ನಾಟೌಟ್: ದಿಲ್ಲಿ ವಿಶ್ವವಿದ್ಯಾನಿಲಯದ ಕಾಲೇಜಿನ ಪ್ರಾಂಶುಪಾಲೆ ಶಾಖವನ್ನು ತಡೆಯಲು ತರಗತಿ ಕೊಠಡಿಯ ಗೋಡೆಗಳಿಗೆ ಹಸುವಿನ ಸೆಗಣಿ ಲೇಪನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ತರಗತಿಯ ಗೋಡೆಗಳಿಗೆ ಹಸುವಿನ ಸೆಗಣಿ ಹಚ್ಚುವ ವಿಡಿಯೋವನ್ನು ಸ್ವತಃ ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲಾ ಪ್ರಾಧ್ಯಾಪಕರ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಡಿಯೋದಲ್ಲಿ ಪ್ರತ್ಯುಷ್ ವತ್ಸಲಾ ಸಿಬ್ಬಂದಿಯ ಸಹಾಯದಿಂದ ಗೋಡೆಗಳಿಗೆ ಹಸುವಿನ ಸೆಗಣಿ ಲೇಪನ ಮಾಡುತ್ತಿರುವುದು ಕಂಡು ಬಂದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಂಶುಪಾಲರ ನಡೆಯ ಬಗ್ಗೆ ವ್ಯಾಪಕ ಪರ-ವಿರೋಧ ಚರ್ಚೆ ವ್ಯಕ್ತವಾಗಿದೆ.

ಪ್ರಾಂಶುಪಾಲರಾದ ಪ್ರತ್ಯೂಷ್ ವತ್ಸಲಾ ಈ ಕುರಿತು ಪ್ರತಿಕ್ರಿಯಿಸಿ, ಸಂಶೋಧನೆಯ ಭಾಗವಾಗಿ ಗೋಡೆಗಳಿಗೆ ಹಸುವಿನ ಸೆಗಣಿ ಲೇಪನ ಮಾಡಲಾಗಿದೆ. ಇದು ಪ್ರಕ್ರಿಯೆಯಲ್ಲಿದೆ. ಒಂದು ವಾರದ ನಂತರ ನಾನು ಸಂಪೂರ್ಣ ಸಂಶೋಧನೆಯ ವಿವರಗಳನ್ನು ಹಂಚಿಕೊಳ್ಳಬಹುದು. ನೈಸರ್ಗಿಕ ಮಣ್ಣನ್ನು ಸ್ಪರ್ಶಿಸುವುದರಿಂದ ಯಾವುದೇ ಹಾನಿಯಾಗದ ಕಾರಣ ನಾನೇ ಒಂದು ಗೋಡೆಗೆ ಸೆಗಣಿ ಲೇಪಿಸಿದ್ದೇನೆ. ಕೆಲವರು ಸಂಪೂರ್ಣ ವಿವರಗಳನ್ನು ತಿಳಿಯದೆ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಸಮಜಾಯಿಸಿ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷರನ್ನು ಕೊಲ್ಲಲು ಹಣಬೇಕೆಂದು ಹೆತ್ತವರನ್ನೇ ಕೊಂದ ಬಾಲಕ..! ಒಂದು ವಾರಗಳ ಕಾಲ ಹೆಣಗಳ ಜೊತೆ ವಾಸ..!

ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶ..! 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದ

See also  ಮಂಗಳೂರು: ಪೊಲೀಸ್ ಕಮಿಷನರ್ ಕುಲ್‌ದೀಪ್ ಜೈನ್ ವರ್ಗಾವಣೆ, ಐದು ತಿಂಗಳ ಹಿಂದೆ ಕಮಿಷನರ್ ಆಗಿ ಬಂದಿದ್ದ ಅಧಿಕಾರಿ ದಿಢೀರ್‌ ವರ್ಗಾವಣೆಯಾದದ್ದು ಏಕೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget